Advertisement

ರೇಷನ್ ಕಾರ್ಡ್ ಇರುವ ಪ್ರತೀ ಗೃಹಿಣಿಗೂ ತಿಂಗಳಿಗೆ 1000 ರೂ : ಸ್ಟಾಲಿನ್

10:15 PM Mar 07, 2021 | Team Udayavani |

ಚೆನ್ನೈ : ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ, ಕಾಂಗ್ರೆಸ್ ಮತ್ತು ವಿಸಿಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. ಇದೇ ಬೆನ್ನಲ್ಲೇ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಇಂದು ತಿರುಚ್ಷಿಯಲ್ಲಿ ಬೃಹತ್ ರ್ಯಾಲಿ ನಡೆಸಿ ತಮಿಳುನಾಡು ಮಿಷನ್ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ.

Advertisement

ಭಾಷಣದಲ್ಲಿ ಮಾತನಾ0ಡಿರುವ ಸ್ಟಾಲಿನ್, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ಹತ್ತು ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ತಮಿಳುನಾಡಿನ ಒಂದು ಕೋಟಿ ಜನರನ್ನು ಬಡತನದಿಂದ ಮುಕ್ತರನ್ನಾಗಿಸುತ್ತೇವೆ ಎಂದಿದ್ದಾರೆ.

ಇದೇ ವೇದಿಕೆಯಲ್ಲಿ ಮಾತನಾಡಿದ ಸ್ಟಾಲಿನ್, ನೀವು ನಮ್ಮನ್ನು ಗೆಲ್ಲಿಸಿದರೆ ರೇಷನ್ ಕಾರ್ಡ್ ಹೊಂದಿರುವ ಪ್ರತೀ ಮನೆಯ ಗೃಹಿಣಿಯರಿಗೆ ಪ್ರತೀ ತಿಂಗಳು 1000 ರೂ. ಹಣವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯದ ಆದಾಯವನ್ನು ದ್ವಿಗುಣಗೊಳಿಸುವುದೇ ನಮ್ಮ ಟಾರ್ಗೆಟ್ ಎಂದಿದ್ದಾರೆ. ಹಾಗೂ ರಾಜ್ಯದ ಜನರ ತಲಾ ಆದಾಯವನ್ನು ನಾಲ್ಕು ಲಕ್ಷಕ್ಕೆ ಏರಿಸಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next