Advertisement

ಪಡಿತರ ಚೀಟಿ: ಇನ್ನಷ್ಟು ಕಾಯಬೇಕು!

10:51 AM Aug 02, 2018 | Harsha Rao |

ಕುಂದಾಪುರ: ಆಹಾರ ಶಾಖೆಯ ತಂತ್ರಾಂಶದಲ್ಲಿ ಇನ್ನೂ ಅವಕಾಶ ಕಲ್ಪಿಸಿದ ಹೊಸದಾಗಿ ಪಡಿತರ ಚೀಟಿ ಪಡೆಯಬಯಸುವವರು ಮತ್ತಷ್ಟು ಕಾಲ ಕಾಯುವಂತಾಗಿದೆ.

Advertisement

ಚುನಾವಣೆ ನೀತಿಸಂಹಿತೆ ಹಿನ್ನೆಲೆ ಯಲ್ಲಿ ಮಾ. 27ರಿಂದ ಸ್ಥಗಿತವಾಗಿದ್ದ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆರೋಗ್ಯ ಕಾರ್ಡ್‌ ನೋಂದಣಿಗೆ ಅಗತ್ಯವಿರುವವರಿಗೆ ಮಾತ್ರ ತುರ್ತಾಗಿ ಪಡಿತರ ಚೀಟಿ ಮಾಡಿಕೊಳ್ಳಬಹುದು.

ಹೊಸದಾಗಿ ಅರ್ಜಿ ಸಲ್ಲಿಸಿದವರು ಆಹಾರ ಮತ್ತು ನಾಗರಿಕ ಪೂರೈಕೆ ಶಾಖೆಗೆ ಅಲೆದಾಡುತ್ತಿದ್ದು, ಸಮರ್ಪಕ ಮಾಹಿತಿ ಇರದ ಅಧಿಕಾರಿಗಳೂ “ಯಾವಾಗ ಆಗುತ್ತದೋ ಗೊತ್ತಿಲ್ಲ’ ಎಂದು ಉತ್ತರಿಸುತ್ತಿದ್ದಾರೆ. ಗ್ರಾ.ಪಂ. ಗಳಲ್ಲಿ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ, ತೆಗೆಯುವುದು, ತಿದ್ದುಪಡಿ ಮಾತ್ರ ನಡೆಯುತ್ತಿದೆ.

ದೃಢೀಕರಣ ಇಲ್ಲ
ಗ್ರಾ.ಪಂ.ಗಳಲ್ಲಿ ತಿದ್ದುಪಡಿ ಮಾಡಿದ ಮೇಲೆ ಮುದ್ರಿತ ಪಡಿತರ ಚೀಟಿ ಫ‌ಲಾನುಭವಿಯ ಮನೆಗೇ ಬರುತ್ತದೆ. ಆದರೆ ತಿದ್ದುಪಡಿಯ ದೃಢೀಕೃತ ಪ್ರತಿ ಪಡೆ ಯಲು ಪುನಃ ತಾಲೂಕು ಕಚೇರಿಯ ಆಹಾರ ಶಾಖೆಗೇ ಬರಬೇಕು. ಪಂಚಾಯತ್‌ನಲ್ಲಿ ಪ್ರಿಂಟ್‌ ತೆಗೆಯಲು ಸಾಫ್ಟ್ ವೇರ್‌ನಲ್ಲಿ ಅವಕಾಶ ಇಲ್ಲ. ಇದರ ಬದಲು ಪಂಚಾಯತ್‌ ನಲ್ಲೇ ಮುದ್ರಣಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆಯೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಆದಾಯ ಪ್ರಮಾಣ ಪತ್ರ
ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಸಾಫ್ಟ್ ವೇರ್‌ನಲ್ಲಿ 5 ವರ್ಷದಿಂದ 18 ವರ್ಷದ ವರೆಗಿನ ಎಲ್ಲರ ಹೆಸರು ಸೇರ್ಪಡೆಗೂ ಆದಾಯ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಆದಾಯವಿಲ್ಲದ ಮಕ್ಕಳಿಗೆ ಕುಟುಂಬದ ಯಜಮಾನನ ಆದಾಯವೇ ಅಂತಿಮ. ಯಜಮಾನ ಮಹಿಳೆಯೇ ಆಗಬೇಕು ಎಂದಿದೆ. ವಿಳಾಸದಲ್ಲಿ ಅದಕ್ಕೆ ಬೇಕಾದ ಪೂರಕ ಅವಕಾಶ ಕಲ್ಪಿಸಿಲ್ಲ. ಆದ್ದರಿಂದ ಹೊಸ ಪಡಿತರ ಚೀಟಿ, ಸೇರ್ಪಡೆ, ತಿದ್ದುಪಡಿ ಸಂದರ್ಭ 18 ವರ್ಷ ಪ್ರಾಯ ದೊಳಗಿನವರಿಗೆ ಆದಾಯ ಪ್ರಮಾಣ ಪತ್ರ ಹಾಜರುಪಡಿಸುವಿಕೆ ಕೈಬಿಟ್ಟು ಒಂದೇ ಆದಾಯ ಪ್ರಮಾಣ ಪತ್ರದಲ್ಲಿ ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕೆಂಬುದು ಸಾರ್ವಜನಿಕರ ಆಗ್ರಹ. 

Advertisement
Advertisement

Udayavani is now on Telegram. Click here to join our channel and stay updated with the latest news.

Next