Advertisement

Ration Card ತಿದ್ದುಪಡಿ: ಸರ್ವರ್‌ ಸಮಸ್ಯೆಯೊಂದಿಗೇ ಮುಗಿದ ಅವಕಾಶ!

12:57 AM Aug 22, 2023 | Team Udayavani |

ಪುತ್ತೂರು: ಪಡಿತರ ಚೀಟಿ ತಿದ್ದುಪಡಿಗೆ ಸೋಮವಾರ ಕೊನೆಯ ದಿನವಾಗಿದ್ದ ಕಾರಣ ಪುತ್ತೂರು, ಸುಳ್ಯ ತಾಲೂಕು ಕಚೇರಿ, ಸೇವಾ ಕೇಂದ್ರಗಳಿಗೆ ಆಗಮಿಸಿದ ಜನರು ಸರ್ವರ್‌ ಡೌನ್‌ನಿಂದ ಸಂಜೆ ತನಕ ಕಾದು ಬರಿಗೈಯಲ್ಲಿ ಮನೆಗೆ ಮರಳಿರುವ ಪ್ರಸಂಗ ಕಂಡುಬಂದಿದೆ.

Advertisement

ತಾಲೂಕು ಆಹಾರ ವಿಭಾಗದ ಸರ್ವರ್‌ ಸಮಸ್ಯೆ ಸೇವಾ ಕೇಂದ್ರಗಳಲ್ಲಿಯು ಕಂಡು ಬಂದಿತ್ತು. ಕೊನೆಯ ದಿನದಂದೂ ನೂರಾರು ಮಂದಿ ಕೇಂದ್ರಗಳಿಗೆ ಬಂದಿದ್ದರೂ ಬೆರೆಳೆಣಿಕೆಯ ಮಂದಿಯದಷ್ಟೇ ಅರ್ಜಿ ಸ್ವೀಕಾರ ಆಗಿದ್ದು ಬಹುತೇಕರದ್ದು ಆಗಿಲ್ಲ ಎಂಬ ಮಾಹಿತಿ ಲಭಿಸಿದೆ.

ತಿದ್ದುಪಡಿಗೆ ಅವಕಾಶ
ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಆ. 18ರಿಂದ 21ರ ತನಕ ಮದ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆ ತನಕ ಅವಕಾಶ ಕಲ್ಪಿಸಲಾಗಿತ್ತು. ಆ. 18, 19ರಂದು ತುರ್ತು ಚಿಕಿತ್ಸೆಗಾಗಿ ಬಿಪಿಎಲ್‌
ಕಾರ್ಡ್‌ನಲ್ಲಿ ಹೆಸರು ಸೇರಿಸಿದ ಅರ್ಜಿಗಳ ವಿಲೇವಾರಿ, ಉಳಿದಂತೆ ಬಿಪಿಎಲ್‌ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವುದು, ರೇಷನ್‌ ಅಂಗಡಿ ಬದಲಾವಣೆ ಮೊದಲಾದ ಅವಕಾಶ ನೀಡಲಾಗಿತ್ತು.

ದಿನಾಂಕ ವಿಸ್ತರಣೆ ಸಾಧ್ಯತೆ
ಸರ್ವರ್‌ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಪಡಿತರ ಚೀಟಿ ತಿದ್ದುಪಡಿಗೆ ಸಮಸ್ಯೆಯಾಗಿದೆ. ಈ ವಿಚಾರವನ್ನು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೂ ಈಗಾಗಲೇ ರಾಜ್ಯದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಕೆಲ ದಿನಗಳ ಕಾಲ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲು ಇಲಾಖೆ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ತಿದ್ದುಪಡಿಗೋಸ್ಕರ 3 ದಿನಗಳಿಂದ ಬರುತಿದ್ದೇನೆ. ತಾಲೂಕು ಕಚೇರಿ, ಸೇವಾ ಕೇಂದ್ರಗಳಿಗೆ ಅಲೆದಾಡಿದರೂ ಪ್ರಯೋಜನ ಆಗಿಲ್ಲ. ಎಲ್ಲೆಡೆ ಸರ್ವರ್‌ ಸಮಸ್ಯೆ ಇತ್ತು.
– ಸುಶೀಲಾ ಪುತ್ತೂರು

Advertisement

ಸುಳ್ಯ ತಾಲೂಕು ಕಚೇರಿಗೆ ಬೆಳಗ್ಗೆ 10 ಗಂಟೆಗೆ ಬಂದಿದ್ದೇನೆ. ಸಂಜೆ ತನಕವು ಆಗಿಲ್ಲ. ನಾಲ್ಕು ಜನರದಷ್ಟೇ ಆಗಿದೆ ಎನ್ನುವ ಮಾಹಿತಿ ಇದೆ.
– ರವಿ ಬೆಳ್ಳಾರೆ

ಅಂತಿಮ ದಿನಾಂಕ ವಿಸ್ತರಣೆ ಬಗ್ಗೆ ಇದುವರೆಗೆ ಅಧಿಕೃತವಾಗಿ ಯಾವುದೇ ಆದೇಶ ಆಗಿಲ್ಲ, ಮಂಗಳವಾರ ಬೆಳಗ್ಗೆ ವೇಳೆಗೆ ಸ್ಪಷ್ಟ ಚಿತ್ರಣ ಸಿಗಬಹುದು.
– ಹೇಮಲತಾ, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next