Advertisement

ಪಡಿತರ ಚೀಟಿ: ರದ್ದಾದ ಹೆಸರು ಸೇರ್ಪಡೆಗೆ ಅವಕಾ

12:09 PM Jan 21, 2018 | Team Udayavani |

ಉಡುಪಿ: ಆಧಾರ್‌ ನೋಂದಣಿಯಾಗದೆ ಪಡಿತರ ಚೀಟಿಯಲ್ಲಿ ರದ್ದುಗೊಂಡಿರುವ ಕುಟುಂಬ ಸದಸ್ಯರ ಹೆಸರುಗಳನ್ನು ಆಧಾರ್‌ ಸಂಖ್ಯೆ ನೀಡಿ ಮರು ಸೇರ್ವಡೆ ಮಾಡಲು ಅವಕಾಶವಿದ್ದು ನಾಗರಿಕರು ಇದರ ಪ್ರಯೋಜನ ಪಡೆಯುವಂತೆ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಆಧಾರ್‌ ನೋಂದಣಿ ಸಮಸ್ಯೆಯಿಂದಾಗಿ ಸುಮಾರು 1,10,000 ಕುಟುಂಬ ಸದಸ್ಯರ ಹೆಸರುಗಳು ಪಡಿತರ ಚೀಟಿಯಿಂದ ರದ್ದುಗೊಂಡಿದ್ದು, ಇಷ್ಟು ಮಂದಿ ನಾಗರಿಕರು ತಮ್ಮ ಪಾಲಿನ ಪಡಿತರ ಸಿಗದೇ ತೊಂದರೆ ಅನುಭವಿಸುವಂತಾಗಿದೆ. ಆದರೆ ರದ್ದುಗೊಂಡಿರುವ ಪಡಿತರ ಚೀಟಿಯಲ್ಲಿನ ಕುಟುಂಬ ಸದಸ್ಯರು ತಮ್ಮ ಆಧಾರ್‌ ಸಂಖ್ಯೆಯನ್ನು ಗ್ರಾಮೀಣ ಪ್ರದೇಶದಲ್ಲಿ ಸಮೀಪದ ಪಂಚಾಯತ್‌ಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿನ ಫ್ರಾಂಚೈಸಿಗಳಲ್ಲಿ ದಾಖಲಿಸಿ, ಮರು ಸೇರ್ಪಡೆಗೆ ಅವಕಾಶವಿದೆ.

ಮರು ಸೇರ್ಪಡೆ ಮಾಡಿದ ನಾಗರಿಕರು ಮಾಹಿತಿಯನ್ನು ತಾಲೂಕು ಕಚೇರಿಯ ಆಹಾರ ಶಾಖೆಗೆ ನೀಡಿ, ಸರಕಾರದಿಂದ ನೀಡುವ ಪಡಿತರ ಸೌಲಭ್ಯದ ಪ್ರಯೋಜನ ಪಡೆಯುವಂತೆ ಹಾಗೂ ಹೆಸರು ಸೇರ್ಪಡೆಗೆ ಅವಕಾಶವಿರುವ ಕುರಿತು ಪಡಿತರ ಅಂಗಡಿಯವರು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಹಾಗೂ ಪಡಿತರ ಚೀಟಿಯಲ್ಲಿ ಬಿಟ್ಟು ಹೋದ ಹೆಸರುಗಳ ಮರು ಸೇರ್ಪಡೆ ಕುರಿತಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ವಿಶೇಷ ಆಭಿಯಾನ ಕಾರ್ಯಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಆಧಾರ್‌ ಸಂಖ್ಯೆ ಜೋಡಣೆ ಆಗಿದ್ದರೂ ಕೆಲವು ಕಡೆ ಪಡಿತರ ಸಿಗುತ್ತಿಲ್ಲ ಎಂದು ಜಾಗೃತ ಸಮಿತಿ ಸದಸ್ಯರು ತಿಳಿಸಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ದೀನ ದಯಾಳ್‌ ವಿದ್ಯುತ್‌ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ವಾಜಪೇಯಿ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯಲು ಬಿಪಿಎಲ್‌ ಕಾರ್ಡ್‌ ಅಗತ್ಯವಿದೆ. ಬಿಪಿಎಲ್‌  ಕಾರ್ಡ್‌ಗೆ ಅರ್ಜಿ ಸಲ್ಲಿಸಿ, ನಿರೀಕ್ಷೆಯಲ್ಲಿರುವ ಸಾರ್ವಜನಿಕರಿಗೆ ಈ ಯೋಜನೆಯ ಪ್ರಯೋಜನಗಳು ತಪ್ಪಿ ಹೋಗದಂತೆ ಆದ್ಯತೆ ಮೇಲೆ ಬಿಪಿಎಲ್‌ ಕಾರ್ಡ್‌ ವಿತರಿಸುವಂತೆ ತಿಳಿಸಿದರು.

ಪಡಿತರ ಅಂಗಡಿಗಳಿಗೆ ಬರಲು ಅಸಾಧ್ಯವಾದ ಅಶಕ್ತರ ಪರವಾಗಿ, ಅವರ ಪರಿಚಯದ ಮತ್ತೂಬ್ಬರಿಗೆ ಪಡಿತರ ನೀಡಲು ಅವಕಾಶವಿದ್ದು, ಇದನ್ನು ಪಾಲಿಸುವಂತೆ ಅಂಗಡಿ ಮಾಲಕರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

Advertisement

ಪಡಿತರ ವಿತರಿಸುವ ಅಂಗಡಿಗಳು ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಿಸು ವಂತೆ, ಅನಾವಶ್ಯಕ ರಜೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಪಡಿತರ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್‌ ಅಳವಡಿಸುವಂತೆ ಹಾಗೂ ಗೋಡೌನ್‌ಗಳಲ್ಲಿ ಪಡಿತರ ಹಾಳಾಗದಂತೆ ಎಚ್ಚರ ವಹಿಸುವಂತೆ ಸಚಿವರು ತಿಳಿಸಿದರು.

ಆಹಾರ ಜಾಗೃತಿ ಸಮಿತಿ ಸಭೆಯ ಸದಸ್ಯರಿಗೆ ಗುರುತಿನ ಚೀಟಿ ನೀಡುವಂತೆ ತಿಳಿಸಿದ ಸಚಿವರು, ಸದಸ್ಯರು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆಗಳ ಕುರಿತು ವರದಿ ನೀಡುವಂತೆ ಸಚಿವರು ಹೇಳಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಆಹಾರ ಇಲಾಖೆಯ ಉಪ ನಿರ್ದೇಶಕ ಎಂ.ಆರ್‌. ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next