Advertisement
ಆಧಾರ್ ಲಿಂಕ್ ಮಾಡಿಸಿಕೊಂಡವರಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರೇ ಹೆಚ್ಚು. ಎಪಿಎಲ್ ಕಾರ್ಡ್‌ದಾರರಲ್ಲಿ ಅನೇಕರು ಪಡಿತರ ಪಡೆಯುತ್ತಿಲ್ಲ, ಹೀಗಾಗಿ ಆಧಾರ್ ಲಿಂಕ್ ಗೊಡವೆಗೆ ಹೋಗಿರಲಿಲ್ಲ. ಸ್ಮಾರ್ಟ್‌ಫೋನ್ ಮೂಲಕ ಲಿಂಕಿಂಗ್‌ಗೆ ಅವಕಾಶ ಇದ್ದರೂ ಅನೇಕರಿಗೆ ಗೊತ್ತಿಲ್ಲದೆ ಮಾಡಿಸಿ ಕೊಂಡಿಲ್ಲ. ಲಿಂಕ್ ಮಾಡಿಸಿ ಕೊಳ್ಳದವರ ಕಾರ್ಡ್‌ಗಳು ಈಗ ನಿಷ್ಕ್ರಿಯಗೊಂಡಿವೆ, ಮುಂದೆ ಇನ್ನಷ್ಟು ಮಂದಿಯ ಚೀಟಿಗಳು ನಿಷ್ಕ್ರಿಯವಾಗುವ ಸಾಧ್ಯತೆ ಇದೆ.
ನಿಷ್ಕ್ರಿಯ ರೇಶನ್ ಕಾರ್ಡ್ ಮತ್ತು ಮನೆಯ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಜತೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಆಧಾರ್‌ನಲ್ಲಿ ಮೊಬೈಲ್ ನಂಬರ್ ದಾಖ ಲಾಗಿರುವ ಸದಸ್ಯರು ಪಂಚಾಯತ್‌ಗೆ ಹೋಗಬೇಕ ಗಿಲ್ಲ. ಮೊಬೈಲ್‌ಗೆ ಬರುವ ಒಟಿಪಿ ತಿಳಿಸಿದರೆ ಸಾಕು. ಕುಟುಂಬದ ಓರ್ವ ಸದಸ್ಯ ಬೆರಳಚ್ಚು ನೀಡಿದರೆ ಹೊಸ ಪಡಿತರ ಚೀಟಿ ಸಿಗುತ್ತದೆ. ಆಧಾರ್‌ನಲ್ಲಿ ಮೊಬೈಲ್ ನಮೂದಾಗಿಲ್ಲದವರು ಬೆರಳಚ್ಚು ನೀಡಬೇಕಾಗುತ್ತದೆ.
Related Articles
ನಿಮ್ಮ ಎಪಿಎಲ್ ಪಡಿತರ ಚೀಟಿ ಚಾಲ್ತಿ ಯಲ್ಲಿದೆಯೇ ಇಲ್ಲವೇ ಎಂಬು ದನ್ನು ಕಾರ್ಡುದಾರರೇ ಸ್ವತಃ ತಿಳಿದು ಕೊಳ್ಳ ಬಹುದು. https://ahara.kar.nic.in/e_services.aspxಯಲ್ಲಿ ನಿಮ್ಮಲ್ಲಿರುವ ಚೀಟಿಯ ಆರ್‌ಸಿ ನಂಬರ್ ನಮೂದಿಸಿ ತಿಳಿಯಲು ಅವಕಾಶವಿದೆ.
Advertisement
ಪಡಿತರ ಚೀಟಿದಾರರು ಆಧಾರ್ ಲಿಂಕ್ ಮಾಡಿಕೊಳ್ಳುವುದು ಅಗತ್ಯ. ಮಾಡಿಸಿಕೊಳ್ಳದಿರುವ ಮತ್ತು ನಿಷ್ಕ್ರಿಯ ಕಾರ್ಡ್‌ಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ. ನಿಷ್ಕ್ರಿಯಗೊಂಡಿದ್ದರೆ, ಹೊಸ ಚೀಟಿ ಪಡೆಯಲು ಅವಕಾಶವಿದೆ.– ವಿಜಯಕುಮಾರ್, ಜಂಟಿ ನಿದೇಶಕರು,
ಆಹಾರ ನಾಗರಿಕ ಸರಬರಾಜು ಇಲಾಖೆ