Advertisement

ಬಳ್ಪ ತ್ರಿಶೂಲಿನೀ ದೇವಸ್ಥಾನದಲ್ಲಿ ರಥೋತ್ಸವ

05:23 PM Apr 08, 2018 | |

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಪೂರ್ಣ ಶಿಲಾಮಯವಾದ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ರಥ ಸಮರ್ಪಣೆಯ ಬಳಿಕ ಮೊದಲ ಬಾರಿ ರಥೋತ್ಸವ ವಿಜೃಂಭಣೆಯಿಂದ ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀಗಳ ನೇತೃತ್ವದಲ್ಲಿ ನಡೆಯಿತು.

Advertisement

ಐತಿಹಾಸಿಕ ಹಿನ್ನೆಲೆಯ ಈ ದೇವಸ್ಥಾನದಲ್ಲಿ ನೂರಾರು ವರ್ಷಗಳ ಹಿಂದೆ ಅತ್ಯಂತ ವೈಭವದಿಂದ ನಡೆಯುತ್ತಿದ್ದ ರಥೋತ್ಸವ ಬಳಿಕ ಕಾರಣಾಂತರದಿಂದ ನಿಂತುಹೋಗಿತ್ತು. ಇದೀಗ ದೇವಸ್ಥಾನ ಅಭಿವೃದ್ಧಿಗೊಂಡು ಬ್ರಹ್ಮಕಲಶದ ಬಳಿಕ ಭಕ್ತರಿಂದ ನೂತನ ರಥ ಸಮರ್ಪಣೆ ಯಾಗಿದ್ದು, ರಥೋತ್ಸವ ನಡೆದಿದೆ. ಶುಕ್ರವಾರ ಬೆಳಗ್ಗೆ ಶ್ರೀ ದೇವರ ರಥಾರೋಹಣದ ಬಳಿಕ ಸಂಜೆ ಬ್ರಹ್ಮರಥೋತ್ಸವ, ಸುಡುಮದ್ದು ಪ್ರದರ್ಶನ, ಉತ್ಸವ ಬಲಿ ನಡೆಯಿತು. 

ಬಳ್ಪ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ.ವಿ., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಕಟ್ಟ, ಅಧ್ಯಕ್ಷ ಸದಾನಂದ ರೈ ಅರ್ಗುಡಿ, ಕೋಶಾಧಿಕಾರಿ ಮುರಳಿ ಕಾಮತ್‌ ಬಳ್ಪ, ಕಾರ್ಯಾಧ್ಯಕ್ಷ ಶ್ರೀಕೃಷ್ಣ ಭಟ್‌ ಪಠೊಳಿ, ಸಂಘಟನ ಕಾರ್ಯದರ್ಶಿ ವಿಶ್ವನಾಥ ರೈ ಅರ್ಗುಡಿ, ಆಡಳಿತ ಮೊಕ್ತೇಸರ ಡಾ| ಮಂಜುನಾಥ ಎಂ.ವಿ. ಸಹಿತ ಸಾವಿರಾರು ಭಕ್ತರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next