Advertisement

Haryana: ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ತಲ್ಲಣ

08:51 AM Oct 10, 2024 | Team Udayavani |

ಹೊಸದಿಲ್ಲಿ: ಹರಿಯಾಣದಲ್ಲಿ ಕಾಂಗ್ರೆಸ್‌ ಸೋಲಿನ ಬೆನ್ನಲ್ಲೇ ವಿಪಕ್ಷ ಒಕ್ಕೂಟದಲ್ಲಿ ಬಿರುಕು ಮೂಡಿದೆ.

Advertisement

ಕಾಂಗ್ರೆಸ್‌ನ ಅತಿಯಾದ ಆತ್ಮವಿಶ್ವಾಸ, ಪ್ರಾದೇಶಿಕ ಪಕ್ಷಗಳನ್ನು ನಿರ್ಲಕ್ಷಿಸುವ ಗುಣ, ಗಟ್ಟಿ ನಿರ್ಧಾರ ಮಾಡಲಾಗದ ಹೈಕಮಾಂಡ್‌ನಿಂದಲೇ ಈ ಸೋಲನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ ಎಂದು ಒಕ್ಕೂಟದ ಮೈತ್ರಿ ಪಕ್ಷಗಳು ಕಿಡಿಯಾಗಿವೆ. ಶಿವಸೇನೆ ಉದ್ಧವ್‌ ಬಣ, ಆಪ್‌, ಟಿಎಂಸಿ, ಆರ್‌ಜೆಡಿ ಸೇರಿದಂತೆ ಹಲವು ಮಿತ್ರಪಕ್ಷಗಳು ಕಾಂಗ್ರೆಸ್‌ ಮೇಲಿನ ಅಸಮಾಧಾನವನ್ನು ಹೊರಹಾಕಿವೆ. ಶಿವಸೇನೆಯ ಮುಖವಾಣಿ “ಸಾಮ್ನಾ’ ಪತ್ರಿಕೆ ಕೂಡ ಕಾಂಗ್ರೆಸ್‌ನ ಹುಳುಕುಗಳನ್ನು ಮೇಲೆತ್ತಿ ತೋರುವ ಮೂಲಕ ಚಾಟಿ ಬೀಸಿದೆ.

ಇನ್ನೂ ಕೆಲವು ಪಕ್ಷಗಳು ಕಾಂಗ್ರೆಸ್‌ ನಂಬಿಕೊಂಡರೆ ನಮಗೂ ಸೋಲೇ ಗತಿ ಎಂಬಂತೆ ಕಾಂಗ್ರೆಸನ್ನು ಅವಗ ಣಿಸಿ ಏಕಮುಖ ನಿರ್ಧಾರದತ್ತ ಹೆಜ್ಜೆ ಹಾಕಲು ಪ್ರಾರಂಭಿ ಸಿವೆ. ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆ ಯಲ್ಲಿ ಆಪ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದುಆಪ್‌ ವಕ್ತಾರೆ ಪ್ರಿಯಾಂಕಾ ಕಕ್ಕರ್‌ ತಿಳಿಸಿದ್ದಾರೆ. ಅತಿಯಾದ ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್‌ ಮತ್ತು ದುರ ಹಂಕಾರಿ ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡಲು ಆಪ್‌ ಸಮರ್ಥವಾಗಿದೆ. ಕಳೆದ 10 ವರ್ಷಗಳಲ್ಲಿ ದಿಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶೂನ್ಯ ಸಾಧಿಸಿದ್ದರೂ ನಾವು ಅವರಿಗೆ ಲೋಕಸಭೆಯಲ್ಲಿ 3 ಸೀಟು ಬಿಟ್ಟು ಕೊಟ್ಟೆವು. ಆದರೆ ಹರಿಯಾಣದಲ್ಲಿ ಅತಿಯಾದ ಆತ್ಮ ವಿಶ್ವಾ ಸದಲ್ಲಿ ಮೈತಿ ಮುರಿದ ಕಾಂಗ್ರೆಸ್‌ ಸೋತಿದೆ ಎಂದಿದ್ದಾರೆ.

ಇತ್ತ ಉತ್ತರ ಪ್ರದೇಶದಲ್ಲಿ ಇನ್ನೂ ದಿನಾಂಕವೂ ನಿಗದಿಯಾಗದ 10 ಕ್ಷೇತ್ರಗಳ ಉಪಚುನಾವಣೆಗಾಗಿ ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಈಗಾ ಗಲೇ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಏಕಮುಖವಾಗಿ ಘೋಷಿಸಿದ್ದಾರೆ. ಮೈತ್ರಿ ಪಕ್ಷ ಕಾಂಗ್ರೆಸ್‌ ಸೀಟು ಬೇಡಿಕೆ ಇಡುವ ಮುಂಚೆಯೇ ಅಖೀಲೇಶ್‌ ಈ ಹೆಜ್ಜೆ ಇಟ್ಟಿರುವುದು ಕಾಂಗ್ರೆಸ್‌ಗೆ ಶಾಕ್‌ ನೀಡಿದಂತಾಗಿದೆ.

ಹೈಕಮಾಂಡ್‌ಗೆ ಗಟ್ಟಿತನವಿಲ್ಲ-ಸಾಮ್ನಾ: ಉದ್ಧವ್‌ ಠಾಕ್ರೆ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಹರಿಯಾಣದ ಕಾಂಗ್ರೆಸ್‌ ಸೋಲನ್ನು ಕಟುವಾಗಿ ಟೀಕಿಸಲಾ ಗಿದೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಗಟ್ಟಿ ನಿರ್ಧಾರ ಮಾಡಲು ಬರುವುದಿಲ್ಲ. ಹರಿಯಾಣದಲ್ಲಿ ಹೂಡಾ ಮತ್ತು ಕುಮಾರಿ ಸೆಲ್ಜಾ ನಡುವಿನ ವೈಮನಸ್ಸು ತಿಳಿದಿದ್ದರೂ ಮಧ್ಯಪ್ರವೇಶಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗ ರಾಜ್ಯದಲ್ಲಿ ಪಕ್ಷದ ನೌಕೆಯೇ ಮುಳುಗಿಹೋಗಿದೆ. ಇದಕ್ಕೆ ಭೂಪಿಂದರ್‌ ಸಿಂಗ್‌ ಹೂಡಾ ಕಾರಣರಾ ಎಂದೂ ಪ್ರಶ್ನಿಸಿದೆ.

Advertisement

ಯಾರಿಗೆ ಯಾರೂ ದೊಡ್ಡಣ್ಣ ಅಲ್ಲ- ಶಿವಸೇನೆ: ಹರಿಯಾಣ ಚುನಾವಣೆಯ ಫ‌ಲಿತಾಂಶ ಮಹಾರಾಷ್ಟ್ರದ ಮೇಲಾಗಲಿ, ಮೈತ್ರಿಕೂಟದ ಮೇಲಾಗಲಿ ಯಾವುದೇ ಪರಿಣಾಮ ಬೀರದು. ಆದರೂ ಈ ಚುನಾವಣ ಫ‌ಲಿ ತಾಂಶದಿಂದ ಕಾಂಗ್ರೆಸ್‌ ಕಲಿಯಬೇಕಿರುವುದು ಬಹಳ ಷ್ಟಿದೆ ಎಂದು ಶಿವಸೇನೆ ಉದ್ಧವ್‌ ಬಣದ ನಾಯಕ, ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ. ಯಾರೋ ಯಾರಿಗೋ ದೊಡ್ಡಣ್ಣ ಎಂದು ಭಾವಿಸುವ ಅಗತ್ಯವಿಲ್ಲ ಎಂದು ಪ್ರಾದೇಶಿಕ್ಷ ಪಕ್ಷಗಳಿಗೆ ಮನ್ನಣೆ ನೀಡಬೇಕೆಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಅಹಂಕಾರ ಒಳ್ಳೆಯದಲ್ಲ- ಟಿಎಂಸಿ: ಟಿಎಂಸಿ ಸಂಸದ ಸಾಕೇತ್‌ ಗೋಖಲೆ ಕಾಂಗ್ರೆಸ್‌ನ ಅಹಂಕಾರವೇ ಸೋಲಿಗೆ ಕಾರಣ ಎಂದು ಚಾಟಿ ಬೀಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿ, ಚುನಾವಣೆಯನ್ನು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮೂಲೆ ಗುಂಪಾಗಿಸುವುದು ಸರಿ ಅಲ್ಲ. ಎಷ್ಟೇ ದೊಡ್ಡ ಪಕ್ಷವಾ ದರೂ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ತನ್ನದೇ ಸ್ಥಾನ ಮಾನವಿದೆ. ಅಲ್ಲಿ ನಮ್ಮ ಗೆಲುವಿಗೆ ಅನುವು ಮಾಡಿ ಕೊಡುವುದೂ ಕೂಡ ಅದೇ ಪಕ್ಷಗಳೇ, ಅವು ಗಳನ್ನು ಕೀಳಾಗಿ ಕಂಡು ಅಹಂಕಾರ ತೋರಿದರೆ ಪರಿ ಣಾಮ ಹೀಗೇ ಇರುತ್ತದೆ. ಇನ್ನಾದರೂ ಕಲಿಯಿರಿ ಎಂದಿದ್ದಾರೆ.

ಮೈತ್ರಿ ತಣ್ತೀ ಗೌರವಿಸಿ- ಆರ್‌ಜೆಡಿ: ಕಾಂಗ್ರೆಸ್‌ಗೆ ಇದು ಆತ್ಮಾವಲೋಕನದ ಸಮಯ. ದೊಡ್ಡ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಗೌರವಿಸಬೇಕು. ಎಲ್ಲರೂ ತ್ಯಾಗ ಮಾಡಿದರೆ ಮಾತ್ರ ಗೆಲುವು ಎಂದು ಆರ್‌ಜೆಡಿ ವಕ್ತಾರ ಸುಭೋದ್‌ ಮೆಹ್ತಾ ಹೇಳಿದ್ದಾರೆ.

ಹರಿಯಾಣದ ಅನಿರೀಕ್ಷಿತ ಫ‌ಲಿ ತಾಂಶದ ಬಗ್ಗೆ ವಿಶ್ಲೇಷಿಸುತ್ತಿ ದ್ದೇವೆ. ಹಲವು ವಿಧಾ ನಸಭಾ ಕ್ಷೇತ್ರ ಗಳಿಂದಲೂ ಹಲ ವಾರು ದೂರುಗಳು ಬಂದಿವೆ. ಈ ವಿಚಾರಗಳನ್ನೆಲ್ಲಾ ಚುನಾ  ವಣ ಆಯೋಗಕ್ಕೆ ತಿಳಿಸಿ, ಚರ್ಚಿಸುತ್ತೇವೆ.
– ರಾಹುಲ್‌ ಗಾಂಧಿ, ವಿಪಕ್ಷ ನಾಯಕ

ಚುನಾವಣೆಯಲ್ಲಿ ಸೋತ ತತ್‌ಕ್ಷಣವೇ ಇವಿಎಂಗಳನ್ನು ದೂಷಿಸುವುದು, ಚುನಾವಣೆ ಆಯೋಗ ಮತ್ತು ಪ್ರಜಾಪ್ರಭುತ್ವವನ್ನೇ ಪ್ರಶ್ನಿಸುವುದು ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹವ್ಯಾಸ ಆಗಿಬಿಟ್ಟಿದೆ. ಹರಿಯಾಣ ಚುನಾವಣೆ ಸೋಲಿನ ಬಳಿಕ ಆ ಪಕ್ಷದ ವರ್ತನೆ ಇದಕ್ಕೆ ತಾಜಾ ನಿದರ್ಶನ.
– ಅನಿಲ್‌ ಬಲೂನಿ, ಬಿಜೆಪಿ ರಾಜ್ಯಸಭಾ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next