Advertisement

ರಥಯಾತ್ರೆ ವಿವಾದ: ಮಮತಾಗೆ ಬಿಜೆಪಿ ಬಗ್ಗೆ ಭಯ: ಅಮಿತ್‌ ಶಾ

03:35 PM Dec 07, 2018 | udayavani editorial |

ಹೊಸದಿಲ್ಲಿ : ‘ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿರುವ ಬಿಜೆಪಿಯ ರಥಯಾತ್ರೆಗೆ ಅನುಮತಿ ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಪ್ರಜಾಸತ್ತಾತ್ಮಕ ನಿಲುವನ್ನು ತಳೆದಿದ್ದಾರೆ. ತಮಗಿರುವ ಅಧಿಕಾರವನ್ನು ದುರುಪಯೋಗಿಸುತ್ತಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಿಡಿ ಕಾರಿದ್ದಾರೆ.

Advertisement

“ನಾನು ಮಮತಾ ಬ್ಯಾನರ್ಜಿ ಅವರಿಗೆ ಹೇಳಲು ಬಯಸುವುದೇನೆಂದರೆ ಬಿಜೆಪಿಯ ಕಾರ್ಯಕ್ರಮಗಳಿಗೆ ನೀವು ಅನುಮತಿ ಕೊಡದಿದ್ದರೆ ನೀವು ರಾಜ್ಯದ ಜನತೆ ಕ್ರೋಧವನ್ನು ಎದುರಿಸಬೇಕಾಗುವುದು; ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಉದ್ದೇಶಿಸಿರುವ ಮೂರೂ ರಾಲಿಗಳನ್ನು ನಡೆಸಿ ಕೋಲ್ಕತದಲ್ಲಿ  ಸಮಾವೇಶಿಸಿದಲ್ಲಿ ನಿಮ್ಮ ಸಂಪೂರ್ಣ ಬದಲಾವಣೆಯ ಬುನಾದಿಯೇ ನಡುಗೀತು ಎಂಬ ಭಯ ನಿಮಗೆ ಇರುವಂತಿದೆ; ಆದುದರಿಂದಲೇ ನೀವು ಈ ಎಲ್ಲ ವರ್ಷಗಳಲ್ಲಿ ಬಿಜೆಪಿ ಕಾರ್ಯಕ್ರಮಗಳನ್ನು ಅಪ್ರಜಾಸತ್ತಾತಕವಾಗಿ ತಡೆದಿದ್ದೀರಿ” ಎಂದು ಅಮಿತ್‌ ಶಾ ಗುಡುಗಿದರು. 

“ನಾವು ನಿಮ್ಮ ಅಪ್ರಜಾಸತ್ತಾತ್ಮಕ ಕ್ರಮಗಳ ವಿರುದ್ಧ ಹೋರಾಡುತ್ತೇವೆ; ರಥಯಾತ್ರೆ ನಡೆಯುವಾಗ ನಾನೇ ಅದರ ನೇತೃತ್ವವನ್ನು ವಹಿಸುತ್ತೇನೆ; ನಮ್ಮನ್ನು ಹತ್ತಿಕ್ಕು ವ ನಿಮ್ಮ ಯಾವುದೇ ತಂತ್ರಗಾರಿಕೆಯನ್ನು ರಾಜ್ಯದ ಬಿಜೆಪಿ ಕಾರ್ಯಕರ್ತರು ನಿರಸನಗೊಳಿಸಲಿದ್ದಾರೆ” ಎಂದು ಶಾ ಅವರು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಎಚ್ಚರಿಕೆ ನೀಡಿದರು. 

‘ನ್ಯಾಯಾಂಗ ಮತ್ತು ಅದರ ತೀರ್ಮಾನಗಳನ್ನು ನಾವು ಗೌರವಿಸುತ್ತೇವೆ; ಅಂತೆಯೇ ರಥ ಯಾತ್ರೆ ರದ್ದಾಗಿಲ್ಲ; ಕೇವಲ ಮುಂದೂಡಲ್ಪಟ್ಟಿದೆ ಎಂದು ಹೇಳಬಯಸುತ್ತೇನೆ’ ಎಂದು ಶಾ ಗುಡುಗಿದರು. 

Advertisement

Udayavani is now on Telegram. Click here to join our channel and stay updated with the latest news.

Next