Advertisement
ಗೋವಾ ರತನ್ ಅವರ ಅಚ್ಚುಮೆಚ್ಚಿನ ಶ್ವಾನ. ಒಮ್ಮೆ ರತನ್ ಟಾಟಾ ಗೋವಾ ಪ್ರವಾಸಕ್ಕೆಂದು ತೆರಳಿದ್ದಾಗ ಅವರ ಹಿಂದೆ ಬಾಲ ಅಲ್ಲಾಡಿಸುತ್ತಾ ಬೀದಿ ಶ್ವಾನವೊಂದು ಹಿಂಬಾಲಿಸಿತ್ತಂತೆ. ಅದರ ಪ್ರೀತಿಗೆ ಸೋತ ರತನ್ ಆ ಶ್ವಾನದ ಮೈದಡವಿ ಅದನ್ನು ಮುಂಬೈಗೆ ಕರೆತಂದು ಪೋಷಿಸಿ ತಮ್ಮ ಜತೆಯಲ್ಲೇ ಇರಿಸಿಕೊಂಡಿದ್ದರು. ಅದು ಗೋವಾದಲ್ಲಿ ಸಿಕ್ಕ ಕಾರಣ ಅದಕ್ಕೆ “ಗೋವಾ’ ಎಂದೇ ನಾಮಕರಣವನ್ನೂ ಮಾಡಿದ್ದರು. ಈಗ ಅದೇ ಗೋವಾ ತನ್ನ ಒಡೆಯ ಎದ್ದೇಳಲಿ, ತನ್ನ ಮೈದಡವಲಿ ಎಂದು ಶವಪೆಟ್ಟಿಗೆ ಬಳಿ ಬಾಲಾ ಅಲ್ಲಾಡಿಸುತ್ತಾ ನಿಂತಿದ್ದು ಮಾತ್ರ ಎಲ್ಲರ ಕಣ್ಣಲ್ಲಿ ಕಂಬನಿ ತುಂಬಿಸಿದೆ. ಬೀದಿ ಶ್ವಾನಗಳ ರಕ್ಷಣೆಗಾಗಿ ದುಡಿತ ಚೇತನಕ್ಕೆ ಗೋವಾ ನೀಡಿದ ಗೌರವ ನಿಜಕ್ಕೂ ದೊಡ್ಡದು.
ರತನ್ ಟಾಟಾ ಕಚೇರಿಯ ಜನರಲ್ ಮ್ಯಾನೇಜರ್ ಎನ್ನುವುದ ಕ್ಕಿಂತಲೂ ಅವರ ವಿಶ್ವಾಸಾರ್ಹ ಗೆಳೆಯರಾಗಿದ್ದ ಶಂತನು ನಾಯ್ಡು ತಮ್ಮ ಒಡೆಯನನ್ನು ಬೆಳಕು ನೀಡುವ ಲೈಟ್ ಹೌಸ್‌ಗೆ ಹೋಲಿಸಿ ಲಿಂಕ್ಡ್ಇನ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿ ಕೊಂಡಿದ್ದಾರೆ. “ಈ ಸ್ನೇಹ ಕಳೆದುಕೊಂಡ ಬಳಿಕ ನನ್ನೊ ಳಗೆ ದೊಡ್ಡ ಕಂದಕ ಸೃಷ್ಟಿಯಾ ಗಿದೆ. ಈ ಕಂದಕ ಮುಚ್ಚಲು ಪ್ರಯತ್ನಿ ಸುತ್ತಾ ನನ್ನ ಉಳಿದ ಜೀವನ ಕಳೆಯುತ್ತೇನೆ. ಪ್ರೀತಿಗೆ ಪಾವ ತಿ ಸ ಬೇಕಾದ ಬೆಲೆ ದುಃಖವಾಗಿದೆ. ಗುಡ್ ಬೈ, ನನ್ನ ಪ್ರೀತಿಯ ಲೈಟ್ ಹೌಸ್’ ಎಂದು ಅವರು ನುಡಿ ನಮನ ಸಲ್ಲಿಸಿದ್ದಾರೆ. ಬಳಿಕ ಟಾಟಾ ಅವರ ಅಂತಿಮ ಯಾತ್ರೆಯೊಂದಿಗೆ ಶಂತನು ತಮ್ಮ ಯೆಜ್ಡಿ ಬೈಕ್‌ನೊಂದಿಗೆ ಸಾಗಿ ಗೌರವ ಸಲ್ಲಿಸಿದರು. 2021ರಲ್ಲಿ ಟಾಟಾ ಅವರು ತಮ್ಮ ಕಿರಿಯ ಸ್ನೇಹಿತ ಶಂತನು ಅವರೊಂದಿಗೆ ಸರಳ ಹುಟ್ಟುಹಬ್ಬ ಆಚರಿಸಿದ ವೀಡಿಯೋ ವೈರಲ್ ಆಗಿತ್ತು.
Related Articles
Advertisement