Advertisement
ಶಾಲಾ ಕಟ್ಟಡ ನಿರ್ಮಾಣ ಭರದಿಂದ ಸಾಗುತ್ತಿದ್ದು, ಅ. 12ರ ವಿಜಯದಶಮಿಯಿಂದ ಇಲ್ಲಿನ ಎಸ್‌ಎಂಎಸ್ ಬಳಿಯ ಮಧುವನ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ಯಾಲಯದಲ್ಲಿ ಪ್ರಿ ಕೆಜಿಯಿಂದ 6ನೇ ತರಗತಿ ವರೆಗಿನ ಪ್ರವೇಶ ಪ್ರಕ್ರಿಯೆ ನಡೆಯಲಿದೆ. 2025ರ ಮೇಯಲ್ಲಿ ಶಾಲಾರಂಭಗೊಳ್ಳಲಿದೆ.
ಪ್ರಶಾಂತ ಹಾಗೂ ನಿರ್ಮಲ ವಾತಾವರಣ, ಸುರಕ್ಷಿತ ಮತ್ತು ಶಿಕ್ಷಣ ಸ್ನೇಹಿ ಪರಿಸರ, ವಿಶಾಲವಾದ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನಾಧಾರಿತ ತರಗತಿ ಕೊಠಡಿ, ಸುವ್ಯವಸ್ಥಿತವಾದ ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯ, ಹೊರಾಂಗಣ ಮತ್ತು ಒಳಾಂಗಣ ಆಟದ ಮೈದಾನ- ವಾಲಿಬಾಲ್, ತ್ರೋಬಾಲ್, ಆ್ಯತ್ಲೆಟಿಕ್ಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಪುಟಾಣಿಗಳಿಗೆ ಪೂರಕವಾದ ಕ್ರೀಡಾ ವಲಯ ಮತ್ತು ಮರಳು ದಿಣ್ಣೆಯ ಬಾಲಕ್ರೀಡಾಂಗಣ ವ್ಯವಸ್ಥೆ, ಮಕ್ಕಳಿಗೆ ಪ್ರಕೃತಿಯಲ್ಲಿ ಕಲಿಯಲು ಅನುಕೂಲವಾಗುವಂತೆ ತೋಟಗಾರಿಕೆ, ನರ್ಸರಿ ವ್ಯವಸ್ಥೆ, ದೃಶ್ಯ ಮತ್ತು ಪ್ರದರ್ಶನ, ಕಲೆ-ಸಂಗೀತ, ನಾಟಕ, ನೃತ್ಯ ಮತ್ತು ಯೋಗ ಶಾಲೆ, ಸುರಕ್ಷತೆಗಾಗಿ ಜಿಪಿಎಸ್ ಅಳವಡಿಸಿದ ಸುಸಜ್ಜಿತ ಸಾರಿಗೆ ವ್ಯವಸ್ಥೆ ಇದೆ. ಉಡುಪಿ, ಮಣಿಪಾಲ, ಕುಂದಾಪುರ, ಮೂಲ್ಕಿ, ಹೆಬ್ರಿ, ಮಲ್ಪೆ ಮತ್ತು ಕಾರ್ಕಳದಿಂದ ಶಾಲಾ ಬಸ್ಸಿನ ವ್ಯವಸ್ಥೆ ಲಭ್ಯವಿದೆ. ವಿಶೇಷತೆಗಳು
ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಆಧಾರಿತ ಪಠ್ಯಕ್ರಮ, ಶಿಶು/ವಿದ್ಯಾರ್ಥಿ ಕೇಂದ್ರಿತ ಪಠ್ಯವಿಧಾನ, ಅರ್ಹ, ತರಬೇತಿ ಹೊಂದಿದ ಮತ್ತು ಬದ್ಧತೆ ಇರುವ ಅಧ್ಯಾಪಕ ವೃಂದ, ವಿದ್ಯಾರ್ಥಿ-ಶಿಕ್ಷಕರ ಅನುಕೂಲಕರ ಅನುಪಾತ ಹೊಂದಿತ ತರಗತಿ ವ್ಯವಸ್ಥೆ, ವೈಯಕ್ತಿಕ ಕಾಳಜಿ ಮತ್ತು ಮಾರ್ಗದರ್ಶನ, ಸಲಹೆ ಮತ್ತು ಆಪ್ತ ಸಮಾಲೋಚನೆ, ಪೋಷಕ ಸಮುದಾಯದೊಂದಿಗೆ ಉತ್ತಮವಾದ ಬಾಂಧವ್ಯ, ರಚನಾತ್ಮಕ ಸಹಪಠ್ಯ ಚಟುವಟಿಕೆಗಳು, ಕ್ರೀಡೆ ಮತ್ತು ವೃತ್ತಿಪರ ತರಬೇತಿ ಇರುತ್ತದೆ.
Related Articles
ಮಕ್ಕಳ ಸಮಗ್ರ ವಿಕಾಸಕ್ಕಾಗಿ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕವೆನ್ನುವ ಪಂಚಮುಖಿ ಶಿಕ್ಷಣ ದೊರೆಯುವುದು ಸಂಸ್ಥೆಯ ವಿಶೇಷ. ಮಾಹಿತಿಗೆ ಇ-ಮೇಲ್: info.udupi@rvkcbse.in ವೆಬ್‌ಸೈಟ್ : //www.rvkcbse.in ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Advertisement
ಏನಿದು ರಾಷ್ಟ್ರೋತ್ಥಾನ ಪರಿಷತ್ ?ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣದ ಲಕ್ಷ್ಯವನ್ನಿಟ್ಟುಕೊಂಡು 1965ರಿಂದ ಕರ್ನಾಟಕದಲ್ಲಿ ಸಕ್ರಿಯವಾಗಿರುವ ಪ್ರಮುಖ ಸ್ವಯಂಸೇವಾ ಸಂಸ್ಥೆಯಾಗಿದೆ. ಭಾರತದ ನೈಜ ಇತಿಹಾಸ, ಸಂಸ್ಕೃತಿ-ಪರಂಪರೆಗಳನ್ನು ಮತ್ತೆ ಜಾಗೃತಗೊಳಿಸಲು ರಾಷ್ಟ್ರೋತ್ಥಾನ ಸಾಹಿತ್ಯದೊಂದಿಗೆ ಪ್ರಾರಂಭವಾದ ಪರಿಷತ್‌ನ ಸಮಾಜಕಾರ್ಯ ಇಂದು ಸಾಹಿತ್ಯ, ಶಿಕ್ಷಣ, ಆರೋಗ್ಯ, ಸೇವೆ ಎಂಬ ನಾಲ್ಕು ಆಯಾಮಗಳೊಂದಿಗೆ ರಾಜ್ಯಾದ್ಯಂತ ಸಕ್ರಿಯವಾಗಿದ್ದು, 18ಕ್ಕೂ ಹೆಚ್ಚು ಪ್ರಕಲ್ಪಗಳು ಹಾಗೂ 60ಕ್ಕೂ ಮಿಕ್ಕಿ ಚಟುವಟಿಕೆಗಳಾಗಿ ಕವಲೊಡೆದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆಗಳ ಸಮೂಹವಾಗಿದೆ. 2005ರಲ್ಲಿ ಮೊದಲ ಶಾಲೆ ಪ್ರಾರಂಭಗೊಂಡರೆ, ಪ್ರಸ್ತುತ ಕರ್ನಾಟಕದಾದ್ಯಂತ 17 ಕಡೆಗಳಲ್ಲಿ 15,000ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.