ಪಾಟ್ನಾ: ರಾಷ್ಟ್ರೀಯ ಲೋಕ ಸಮತಾ ಪಕ್ಷ(RLSP)ವನ್ನು ಇನ್ನು ಮುಂದೆ ‘ರಾಷ್ಟ್ರೀಯ ಲೋಕ ಮೋರ್ಚಾ’ ಎಂದು ಕರೆಯಲಾಗುವುದು ಎಂದು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಭಾನುವಾರ ಘೋಷಿಸಿದ್ದಾರೆ.
ಹೊಸ ಸಂಘಟನೆಗೆ ‘ರಾಷ್ಟ್ರೀಯ ಲೋಕ ಜನತಾ ದಳ’ ಎಂದು ನಾಮಕರಣ ಮಾಡಿ ಚುನವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ ನಂತರ ಇನ್ನೂ ಕೆಲವು ಪರ್ಯಾಯಗಳೊಂದಿಗೆ ಬರಲು ಹೇಳಿತ್ತು. ಚುನಾವಣಾ ಆಯೋಗವು ರಾಷ್ಟ್ರೀಯ ಲೋಕ ಮೋರ್ಚಾ ಗೆ ಒಪ್ಪಿಗೆ ನೀಡಿದೆ ಎಂದು ಕುಶ್ವಾಹಾ ಹೇಳಿದರು.
ಬಿಹಾರದಲ್ಲಿ ಎನ್‌ಡಿಎಯ ಮೈತ್ರಿಕೂಟದ ಪಾಲುದಾರರಾಗಿರುವ ಕುಶ್ವಾಹಾ, ರಾಜ್ಯದ ಎಲ್ಲಾ 40 ಸಂಸದೀಯ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟದ ಗೆಲುವನ್ನು ಖಚಿತಪಡಿಸಿಕೊಳ್ಳಲು ತಮ್ಮ ಪಕ್ಷವು ತನ್ನ ಕೆಲಸವನ್ನು ಮಾಡುತ್ತದೆ ಎಂದರು.
ಒಂದು ತಿಂಗಳ ಹಿಂದೆ ಎನ್‌ಡಿಎಗೆ ಮರಳಿದ ನಿತೀಶ್ ಕುಮಾರ್ ಅವರಿಗೆ ಬಾಗಿಲು ಇನ್ನೂ ತೆರೆದಿದೆ ಎಂದು ಹೇಳಿದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರನ್ನು ಲೇವಡಿ ಮಾಡಿದ ಕುಶ್ವಾಹಾ “ಜೆಡಿಯು ನಿಂದ ಬೇರ್ಪಟ್ಟ ನಂತರ ಲಾಲು ಜಿ ಅವರು ಛಿದ್ರಗೊಂಡಂತೆ ತೋರುತ್ತಿದೆ, ಅವರು ಹೆಚ್ಚು ಅರ್ಥವಿಲ್ಲದ ವಿಷಯಗಳನ್ನು ಮಾತನಾತ್ತಿದ್ದಾರೆ, ”ಎಂದರು.
ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಯನ್ನು ಉಪೇಂದ್ರ ಕುಶ್ವಾಹ 3 ಮಾರ್ಚ್ 2013 ರಂದು ಪ್ರಾರಂಭಿಸಿದ್ದರು. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಉಪೇಂದ್ರ ಕುಶ್ವಾಹ ನಡುವಿನ ತೀವ್ರ ಭಿನ್ನಾಭಿಪ್ರಾಯದ ಪರಿಣಾಮವಾಗಿ ಪಕ್ಷವು ಅಸ್ತಿತ್ವಕ್ಕೆ ಬಂದಿತ್ತು. ಕುಶ್ವಾಹ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ತೊರೆದು ತಮ್ಮದೇ ಆದ ಪಕ್ಷವನ್ನು ಕಟ್ಟಿದ್ದರು.