ಬೆಳ್ಳಂದೂರು ಕೆರೆಯ ಬಗ್ಗೆ ಎಲ್ಲರಿಗೂ ಗೊತ್ತು. ಕೆರೆ ಕಲುಷಿತಗೊಂಡ ಪರಿಣಾಮ ನೊರೆಯಿಂದ ತುಂಬಿಕೊಂಡು ದೊಡ್ಡ ಮಟ್ಟದಲ್ಲಿ ಈ ಕೆರೆ ಸುದ್ದಿಯಾಗುತ್ತಲೇ ಇದೆ. ಈಗ ಈ ಕೆರೆ ಪಕ್ಕ ನಿಂತುಕೊಂಡು ನಟಿಯೊಬ್ಬರು ಫೋಟೋಶೂಟ್ ಮಾಡಿಸಿದ್ದಾರೆ. ಆ ನಟಿ ಬೇರಾರು ಅಲ್ಲ, ರಶ್ಮಿಕಾ ಮಂದಣ್ಣ. ಹೌದು, ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆ ಪಕ್ಕ ನಿಂತುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ.
ಸಾಮಾನ್ಯವಾಗಿ ನಟಿಯರು ಅದ್ಧೂರಿ ಲೊಕೇಶನ್‌ಗಳಲ್ಲಿ ಪೋಟೋಶೂಟ್ ಮಾಡಿಸುತ್ತಾರೆ. ಹೀಗಿರುವಾಗ ರಶ್ಮಿಕಾ ಬೆಳ್ಳಂದೂರು ಕೆರೆ ಪಕ್ಕ ಫೋಟೋಶೂಟ್ ಮಾಡಿಸಲು ಕಾರಣವೇನು ಎಂದು ನೀವು ಕೇಳಬಹುದು. ಜಲಮಾಲಿನ್ಯವನ್ನು ವಿರೋಧಿಸಿ ರಶ್ಮಿಕಾ ಫೋಟೋಶೂಟ್ ಮಾಡಿಸಿದ್ದು, ಅದಕ್ಕಾಗಿ ಬೆಳ್ಳಂದೂರು ಕೆರೆಯನ್ನು ಆಯ್ಕೆ ಮಾಡಿದ್ದಾರೆ.
ಕೆರೆ ಪಕ್ಕ ನಿಂತು ಚಿಂತಕ್ರಾಂತರಾಗಿರುವಂತೆ, ಜೊತೆಗೆ ಪ್ಲಾಸ್ಟಿಕ್‌ಗಳ ಮಧ್ಯೆ ತೇಲಾಡುತ್ತಿರುವಂತೆ ವಿವಿಧ ಭಂಗಿಯಲ್ಲಿ ಫೋಟೋಶೂಟ್ ಮಾಡಿಸಿರುವ ರಶ್ಮಿಕಾ, ನಮ್ಮ ನೀರಿನ ಮೂಲಗಳನ್ನು ಕಲುಷಿತಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ.