Advertisement

ದರ್ಶನ್ ಜೊತೆಗಿನ ಫೋಟೋ ಶೇರ್ ಮಾಡಿದ ರಶ್ಮಿಕಾ ಮಂದಣ್ಣ

12:01 PM Mar 02, 2021 | Team Udayavani |

ಇದೀಗ ಬಿ-ಟೌನ್‍ನಲ್ಲಿ ಕಮಾಲ್‍ ಮಾಡುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಜೊತೆಗಿನ ಫೋಟೋ ಒಂದನ್ನು ಟ್ವಿಟ್ಟರ್‍ನಲ್ಲಿ ಶೇರ್‍ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಕಿರಿಕ್‍ ಹುಡುಗಿ ದಚ್ಚು ಜೊತೆಗಿನ ಫೋಟೋವನ್ನು ಯಾಕೆ ಪೋಸ್ಟ್‍ ಮಾಡಿದ್ರು ಅಂದ್ರಾ..? ಅದಕ್ಕೆ ಕಾರಣ ಇದೆ. ಮುಂದೆ ಓದಿ.

Advertisement

ನಿನ್ನೆಗೆ ಅಂದ್ರೆ ಮಾರ್ಚ್‍ 1ಕ್ಕೆ ದರ್ಶನ್‍ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಯಜಮನ ಸಿನಿಮಾ ರಿಲೀಸ್‍ ಆಗಿ ಎರಡು ವರ್ಷಗಳು ಗತಿಸಿವೆ. ಇದೇ ಹಿನ್ನೆಯಲ್ಲಿ ರಶ್ಮಿಕಾ ತಮ್ಮ ಸೋಷಿಯಲ್‍ ಮೀಡಿಯಾದಲ್ಲಿ ದರ್ಶನ್ ಜೊತೆಗಿನ ಫೋಟೋ ಹಾಕಿ ಖುಷಿ ಹಂಚಿಕೊಂಡಿದ್ದಾರೆ.

ಈ ಸಿನಿಮಾ ವಿಶೇಷ ಅಂದ್ರೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮೊಟ್ಟ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟು ಚಾಲೆಂಜಿಂಗ್‍ ಸ್ಟಾರ್‍ಗೆ ಆಕ್ಷನ್‍ ಕಟ್‍ ಹೇಳಿದ್ದಾರೆ. ಇನ್ನು ಯಜಮಾನ ಸಿನಿಮಾಕ್ಕೆ ನಿರ್ಮಾಪಕರಾದ ಬಿ.ಸುರೇಶ್​ ಹಾಗೂ ಶೈಲಜಾ ನಾಗ್ ಬಂಡವಾಳ ಹೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next