Advertisement
ಕದನ ವಿರಾಮ ಉಲ್ಲಂಘಿಸಿದರೆ ಮತ್ತು ದಾಳಿಗೆ ಹೆಜ್ಬುಲ್ಲಾ ಮರುಸಜ್ಜುಗೊಳಿಸಲು ಪ್ರಯತ್ನಿಸಿದರೆ, ನಾವು ಬಲವಾದ ತಿರುಗೇಟು ನೀಡುತ್ತೇವೆ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
Related Articles
ಇನ್ನೊಂದೆಡೆ ಗಾಜಾದಲ್ಲಿ, ಇಸ್ರೇಲಿ ಪಡೆಗಳು ಪಟ್ಟುಬಿಡದೆ ದಾಳಿಯ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಝೈಟೂನ್ ನೆರೆಹೊರೆಯಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುವ ಶಾಲೆಯ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.
Advertisement
2023 ಅಕ್ಟೋಬರ್ ನಿಂದ ಇಸ್ರೇಲ್ ಲೆಬನಾನ್ನಲ್ಲಿ 1.2 ಮಿಲಿಯನ್ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ.ದಾಳಿಯಲ್ಲಿ 3,768 ಜನರ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ ಎರಡು ತಿಂಗಳುಗಳಲ್ಲೇ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಹೆಜ್ಬುಲ್ಲಾ ಮತ್ತು ಅದರ ಲೆಬನಾನಿನ ಮಿತ್ರರಾಷ್ಟ್ರಗಳು ಯುದ್ಧದ ಅಂತ್ಯವನ್ನು ಯಾವ ಮಟ್ಟದಲ್ಲಿ ಬೆಂಬಲಿಸುತ್ತಾರೆ, ಕದನ ವಿರಾಮದ ನಿಯಮಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಕಾಡು ನೋಡಬೇಕಿದೆ.