Advertisement

ದೇವರಕೊಂಡ – ರಶ್ಮಿಕಾ ರಹಸ್ಯ ಮದುವೆ? : ವೈರಲ್ ಆಯಿತು ಫೋಟೋ

04:34 PM Nov 23, 2022 | Team Udayavani |

ಮುಂಬಯಿ: ಬಣ್ಣದ ಲೋಕದಲ್ಲಿ ಗಾಸಿಪ್‌ ಗಳು ಹರಿದಾಡುತ್ತಲೇ ಇರುತ್ತವೆ. ಬ್ರೇಕಪ್‌, ಡೇಟಿಂಗ್‌ ಗಾಸಿಪ್‌ ಗಳು ತುಸು ಹೆಚ್ಚೇ ಹರಿದಾಡುತ್ತವೆ. ಈ ವಿಷಯಗಳನ್ನೇ ಫ್ಯಾನ್ಸ್‌ ಗಳು ಕೆಲವೊಮ್ಮೆ ವೈರಲ್‌ ಮಾಡುವುದುಂಟು.

Advertisement

ನಟಿ ರಶ್ಮಿಕಾ ಮಂದಣ್ಣ ,ನಟ ವಿಜಯ್ ದೇವರಕೊಂಡ 2018 ರಲ್ಲಿ ʼʼಗೀತ ಗೋವಿಂದಂʼʼ , 2019 ರಲ್ಲಿ ತೆರೆಕಂಡ “ಡಿಯರ್ ಕಾಮ್ರೇಡ್” ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ನಡುವಿನ ಕೆಮೆಸ್ಟ್ರಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸಿನಿಮಾದ ಬಳಿಕ ಅನೇಕ ಬಾರಿ ರಶ್ಮಿಕಾ – ವಿಜಯ್‌ ದೇವರಕೊಂಡ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಗಾಸಿಪ್‌ ಹಬ್ಬಿತ್ತು. ಇತ್ತೀಚೆಗೆ ಮಾಲ್ಡೀವ್ಸ್‌ ಗೆ ಇಬ್ಬರು ಒಟ್ಟಾಗಿಯೇ ಹೋಗಿದ್ದರು ಎಂದು ಫ್ಯಾನ್ಸ್‌, ಸೆಲೆಬ್ರಿಟಿಗಳ ಫೋಟೋಗಳನ್ನು ನೋಡಿಯೇ ಚರ್ಚಾ ವಿಷಯವನ್ನಾಗಿ ಮಾಡಿದ್ದರು.

ಈ ನಡುವೆ ರಶ್ಮಿಕಾ – ವಿಜಯ್‌ ದೇವರಕೊಂಡ ಮದುವೆಯಾಗಿರುವ ಲುಕ್‌ ನಲ್ಲಿರುವ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಎಲ್ಲಿಯವರೆಗೆ ಅಂದರೆ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಕೆಲವರು ಗಾಸಿಪ್‌ ಮಾಡುತ್ತಿದ್ದಾರೆ. ವೈರಲ್‌ ಆಗುತ್ತಿರುವ ಬೆನ್ನಲ್ಲೇ  ಅಭಿಮಾನಿಯೊಬ್ಬ ಫೋಟೋ ಶಾಪ್‌ ನಲ್ಲಿ ಎಡಿಟ್‌ ಮಾಡಿದ ಫೋಟೋವೆಂದು ಗೊತ್ತಾಗಿದೆ.

ಈ ಹಿಂದೆ ʼಕಾಫಿ ವಿತ್‌ ಕರಣ್‌ʼ ಕಾರ್ಯಕ್ರಮದಲ್ಲಿ ವಿಜಯ್‌ ದೇವರಕೊಂಡ ಮಾತನಾಡಿ ನಾವಿಬ್ಬರೂ ಒಟ್ಟಿಗೆ ಎರಡೂ ಸಿನಿಮಾ ಮಾಡಿದ್ದೇವೆ. ಅವಳು ನನಗೆ ಇಷ್ಟ. ಆಕೆ ನನ್ನ ಒಳ್ಳೆಯ ಸ್ನೇಹಿತೆ ಎಂದಿದ್ದರು.

Advertisement

ಇತ್ತೀಚೆಗೆ ವಿಜಯ್‌ ದೇವರಕೊಂಡ ಅವರ ʼಲೈಗರ್‌ ʼ ಸಿನಿಮಾಕ್ಕೆ ದೊಡ್ಡ ಸೋಲಾಗಿತ್ತು. ರಶ್ಮಿಕಾ ಮಂದಣ್ಣ ಅಮಿತಾಭ್‌ ಬಚ್ಚನ್‌ ರೊಂದಿಗೆ ಬಂದ ʼಗುಡ್‌ ಬೈʼ ಅಷ್ಟು ಕಮಾಲ್‌ ಮಾಡಿರಲಿಲ್ಲ.

ಸದ್ಯ ರಶ್ಮಿಕಾ ಮಂದಣ್ಣ ʼಪುಷ್ಪ-2ʼ, ʼವಾರಿಸುʼ, ಆ್ಯನಿಮಲ್‌ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್‌ ದೇವರಕೊಂಡ ʼಜನಗಣಮನʼ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next