Advertisement

ಗ್ಲಾಮರಸ್‌ ಲುಕ್‌ ನಲ್ಲಿ ಕಾಣಿಸಿಕೊಂಡ ರಶ್ಮಿಕಾ: ಉರ್ಫಿ ಜಾವೇದ್‌ಗೆ ಹೋಲಿಸಿದ ನೆಟ್ಟಿಗರು

04:39 PM Feb 27, 2023 | Team Udayavani |

ಮುಂಬಯಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದಾ ಟ್ರೆಂಡ್‌ ನಲ್ಲಿರುತ್ತಾರೆ.  ಸೋಶಿಯಲ್‌ ಮೀಡಿಯಾದಲ್ಲೂ ಆ್ಯಕ್ಟಿವ್‌ ಆಗಿರುತ್ತಾರೆ. ಫ್ಯಾಷನ್‌ ಲುಕ್‌ ನಿಂದಲೂ ರಶ್ಮಿಕಾ ಸುದ್ದಿಯಲ್ಲಿರುತ್ತಾರೆ.  ಭಾನುವಾರ (ಫೆ.26  ರಂದು) ಮುಂಬಯಿಯಲ್ಲಿ ಅವಾರ್ಡ್ ಕಾರ್ಯಕ್ರಮದಲ್ಲಿ‌ ಭಾಗವಹಿಸಿದ ನಟಿ ರಶ್ಮಿಕಾ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ತಾಲ್ ಕೆಡೆಮ್ ಬ್ರೈಡಲ್ ಕೌಚರ್ ಬ್ರ್ಯಾಂಡ್‌ ನ ಕಪ್ಪು ಬಣ್ಣದ ಔಟ್‌ ಫಿಟ್‌ ನಲ್ಲಿ ನಟಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಸ್ಲಿವ್ ಲೆಸ್ ಉಡುಗೆಯಲ್ಲಿ ನಟಿ ರಶ್ಮಿಕಾ ಕ್ಯೂಟ್‌ ಆಗಿ ಪೋಸ್‌ ಕೊಟ್ಟಿದ್ದಾರೆ. ರೆಡ್‌ ಕಾರ್ಪೆಟ್‌ ನಲ್ಲಿ ಬ್ಯೂಟಿಫುಲ್‌ ಲುಕ್‌ ನಲ್ಲಿ ಕಾಣಿಸಿಕೊಂಡು, ಸೋಶಿಯಲ್‌ ಮೀಡಿಯಾದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅವಾರ್ಡ್‌ ಪಡೆದುಕೊಂಡ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆಶ್ಲೀಲ ವಿಡಿಯೋ ಕೇಸ್‌ ಬಳಿಕ ಮೊದಲ ಬಾರಿ ಮಾಸ್ಕ್‌ ಇಲ್ಲದೆ ಕಾಣಿಸಿಕೊಂಡ ರಾಜ್‌ ಕುಂದ್ರಾ

ರಶ್ಮಿಕಾ ಮಂದಣ್ಣ ಗ್ಲಾಮರಸ್‌ ಲುಕ್‌ ನಲ್ಲಿ ಕಾಣಿಸಿಕೊಂಡು, ಒಂದೆಡೆ ಟ್ರೋಲ್‌ ಗಳಿಗೆ ಆಹಾರವಾಗಿದ್ದಾರೆ. ಕೆಲ ಮಂದಿ ರಶ್ಮಿಕಾ ಅವರ ಔಟ್‌ ಫಿಟ್‌ ನೋಡಿ ಅವರನ್ನು ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ.

ನೆಟ್ಟಿಗರೊಬ್ಬರು “ಎಲ್ಲರೂ ಉರ್ಫಿ ರೀತಿ ಆಗುತ್ತಾರ?ʼ ಎಂದಿದ್ದಾರೆ. ಮತ್ತೊಬ್ಬರು “ಇವರು ಈಗಲೂ ಉರ್ಫಿಯನ್ನು ಫಾಲೋ ಮಾಡುತ್ತಿದ್ದಾರೆ ಇರಬೇಕು” ಎಂದಿದ್ದಾರೆ. ಇವರು ಉರ್ಫಿಯಿಂದ ಸ್ಪೂರ್ತಿ ಪಡೆದಿದ್ದಾರೆ. ಉರ್ಫಿಯಿಂದ ಯಾವುದೇ ಕ್ಲಾಸ್‌ ತೆಗೆದುಕೊಳ್ಳಬೇಡಿ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

Advertisement

ಇತ್ತೀಚೆಗೆ ರಶ್ಮಿಕಾ ಅವರ ʼವಾರಿಸುʼ ಹಾಗೂ ʼಮಿಷನ್‌ ಮಜ್ನುʼ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಹಿಟ್‌ ಸಾಲಿಗೆ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next