ಮುಂಬಯಿ: ʼಕಿರಿಕ್ ಪಾರ್ಟಿʼ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ನಟಿಗೆ ಲಕ್ಷಾಂತರ ರೂಪಾಯಿಯ ವಂಚನೆಯಾಗಿದೆ ಎನ್ನುವುದರ ಬಗ್ಗೆ ಸುದ್ದಿಯಾಗಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ 80 ಲಕ್ಷ ರೂ.ಯ ವಂಚನೆಯಾಗಿದೆ. ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಅವರಿಂದ 80 ಲಕ್ಷ ರೂ. ವಂಚನೆಯಾಗಿದೆ ಎಂದು ʼಪಿಂಕ್ ವಿಲ್ಲಾ” ವರದಿ ತಿಳಿಸಿದೆ.
ಇದನ್ನೂ ಓದಿ: Om Raut: ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ:ʼಆದಿಪುರುಷ್ʼ ನಿರ್ದೇಶಕ
ಮ್ಯಾನೇಜರ್ ಬಹು ಸಮಯದಿಂದ ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಮ್ಯಾನೇಜರ್ 80 ಲಕ್ಷ ರೂ. ವಂಚನೆ ಎಸಗಿದ ಬಗ್ಗೆ ಗೊತ್ತಾದ ಕೂಡಲೇ ನಟಿ ಮ್ಯಾನೇಜರ್ ನನ್ನು ವಜಾಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸದ್ಯ ಈ ಪ್ರಕರಣದ ಬಗ್ಗೆ ನಟಿ ರಶ್ಮಿಕಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಶ್ಮಿಕಾ ಮಂದಣ್ಣ ,ರಣ್ಬೀರ್ ಕಪೂರ್ ಅವರ ʼಅನಿಮಲ್ʼ ಚಿತ್ರ ರಿಲೀಸ್ ಗೆ ರೆಡಿಯಾಗಿದೆ.