Advertisement

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

12:19 PM Oct 18, 2021 | Team Udayavani |

ಸದ್ಯ ಸೋಷಿಯಲ್ ಮೀಡಿಯಾದ್ದೇ ಹವಾ.. ಎಲ್ಲರ ಕೈಯಲ್ಲೂ ಮೊಬೈಲ್ ಬಂದ ಮೇಲೆ ಸಾಮಾಜಿಕ ಜಾಲತಾಣ ತುಂಬಾ ಸದ್ದು ಮಾಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಫೋರ್ಬ್ಸ್ ಸಂಸ್ಥೆಯು ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಸೌತ್ ಫಿಲಂ ಇಂಡಸ್ಟ್ರಿಯ ನಟ- ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಯಾರು ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ, ಹೆಚ್ಚು ಸಕ್ರಿಯರಾಗಿದ್ದು, ಯಾರ ಪೋಸ್ಟ್ ಗಳಿಗೆ ಪ್ರತಿಕ್ರಿಯೆಗಳು ಹೆಚ್ಚಿಗೆ ಬರುತ್ತದೆ ಹೀಗೆ ಹಲವಾರು ಅಂಶಗಳ ಆಧಾರದ ಮೇಲೆ ಪಟ್ಟಿಯನ್ನು ಸಿದ್ಧ ಮಾಡಿದೆ.

Advertisement

ಇನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಸದ್ದು ಮಾಡುತ್ತಿರುವ ನಟ ಅಂದ್ರೆ ಯಶ್.  ಫೋರ್ಬ್ಸ್  ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇವರ ಹೆಸರು ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ  ಫೋರ್ಬ್ಸ್ ಪಟ್ಟಿಯಲ್ಲಿ ಯಶ್ ಅವರನ್ನು ಹಿಂದಿಕ್ಕಿ ಕನ್ನಡದ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮುಂದೆ ಸಾಗಿದ್ದಾರೆ.

ಹೌದು ಫೋರ್ಬ್ಸ್ ನಡೆಸಿದ ಸಮೀಕ್ಷೆಯಲ್ಲಿ  ರಶ್ಮಿಕಾ ಮಂದಣ್ಣ 9. 88 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.  ವಿಜಯ್ ದೇವರಕೊಂಡ ಪಟ್ಟಿಯಲ್ಲಿ 9.67 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನಗಳಿಸಿದ್ದಾರೆ. ಇನ್ನು ನಮ್ಮ ಕನ್ನಡದ ಯಶ್ಅವರು 9.54 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next