Advertisement

ಪುರಸಭೆ ಅಧ್ಯಕ್ಷೆಯಾಗಿ ರಶೀದಾ ಅವಿರೋಧ ಆಯ್ಕೆ

09:36 PM Dec 30, 2021 | Team Udayavani |

ಮಾನ್ವಿ: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ 24ನೇ ವಾರ್ಡ್‌ ಕಾಂಗ್ರೆಸ್‌ ಸದಸ್ಯೆ ರಶೀದಾ ಬೇಗಂ ಮಾತ್ರ ನಾಮ ನಿರ್ದೇಶನ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣೆ ಅ ಧಿಕಾರಿಗಳಾದ ತಹಶೀಲ್ದಾರ್‌ ಪರಶುರಾಮ ಘೋಷಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಿಂದುಳಿದ ವರ್ಗ “ಅ ಮಹಿಳೆ’ ಮೀಸಲಾತಿ ಹೊಂದಿದ್ದ ಅಧ್ಯಕ್ಷ ಸ್ಥಾನಕ್ಕೆ ಸೂμಯ ಬೇಗಂ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ 24ನೇ ವಾರ್ಡ್‌ ಕಾಂಗ್ರೆಸ್‌ ಸದಸ್ಯೆ ರಶೀದಾ ಬೇಗಂ ಮಾತ್ರ ನಾಮ ನಿರ್ದೇಶನ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಗ್ರೇಡ್‌-2 ತಹಶೀಲ್ದಾರ್‌ ಅಬ್ದುಲ್‌ ವಾಹಿದ್‌, ಪುರಸಭೆ ಮುಖ್ಯಾಧಿ  ಕಾರಿ ಜಗದೀಶ ಭಂಡಾರಿ ಸೇರಿದಂತೆ ಪುರಸಭೆ ಸದಸ್ಯರು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next