Advertisement

IND V/s AFG: ಭಾರತ ಪ್ರವಾಸ- ಅಫ್ಘಾನ್‌ ತಂಡಕ್ಕೆ ಮರಳಿದ ರಶೀದ್‌ ಖಾನ್‌

11:08 PM Jan 06, 2024 | Team Udayavani |

ಕಾಬೂಲ್‌: ಭಾರತ ಪ್ರವಾಸದ ವೇಳೆ ಆಡಲಾಗುವ 3 ಪಂದ್ಯಗಳ ಟಿ20 ಸರಣಿಗೆ ಅಫ್ಘಾನಿಸ್ಥಾನ ತಂಡ ಶನಿವಾರ ಪ್ರಕಟಗೊಂಡಿದೆ. ಗಾಯದಿಂದ ಚೇತರಿಸಿಕೊಂಡ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಯುವ ಆಟಗಾರ ಇಬ್ರಾಹಿಂ ಜದ್ರಾನ್‌ ನಾಯಕರಾಗಿ ಮುಂದುವರಿಯಲಿದ್ದಾರೆ.

Advertisement

ಇತ್ತೀಚಿನ ಯುಎಇ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಮುಜೀಬ್‌ ಉರ್‌ ರೆಹಮಾನ್‌, ಯುಎಇ ಸರಣಿ ವೇಳೆ ಮೀಸಲು ಆಟಗಾರನಾಗಿದ್ದ ಇಕ್ರಮ್‌ ಅಲಿಖೀಲ್‌ ಮುಖ್ಯ ತಂಡಕ್ಕೆ ಸೇರ್ಪಡೆಗೊಂಡರು.

ಇಬ್ರಾಹಿಂ ಜದ್ರಾನ್‌ ನಾಯಕತ್ವದಲ್ಲೇ ಅಫ್ಘಾನ್‌ ತಂಡ ಯುಎಇ ವಿರುದ್ಧ 2-1 ಅಂತರದಿಂದ ಸರಣಿ ಜಯಿಸಿತ್ತು. ಹೀಗಾಗಿ ಇವರನ್ನೇ ಮುಂದುವರಿಸಲಾಗಿದೆ.

ಅಫ್ಘಾನಿಸ್ಥಾನ ತಂಡ: ಇಬ್ರಾಹಿಂ ಜದ್ರಾನ್‌ (ನಾಯಕ), ರೆಹಮಾನುಲ್ಲ ಗುರ್ಬಜ್‌, ಇಕ್ರಮ್‌ ಅಲಿಖೀಲ್‌, ಹಜ್ರತುಲ್ಲ ಜಜಾಯ್‌, ರೆಹಮತ್‌ ಶಾ, ನಜೀಬುಲ್ಲ ಜದ್ರಾನ್‌, ಮೊಹಮ್ಮದ್‌ ನಬಿ, ಕರೀಂ ಜನ್ನತ್‌, ಅಜ್ಮತುಲ್ಲ ಒಮರ್‌ಜಾಯ್‌, ಶರಾಫ‌ುದ್ದೀನ್‌ ಅಶ್ರಫ್, ಮುಜೀಬ್‌ ಉರ್‌ ರೆಹಮಾನ್‌, ಫ‌ಜಲ್‌ ಹಕ್‌ ಫಾರೂಖೀ, ಫ‌ರೀದ್‌ ಅಹ್ಮದ್‌, ನವೀನ್‌ ಉಲ್‌ ಹಕ್‌, ನೂರ್‌ ಅಹ್ಮದ್‌, ಮೊಹಮ್ಮದ್‌ ಸಲೀಂ, ಖೈಸ್‌ ಅಹ್ಮದ್‌, ಗುಲ್ಬದಿನ್‌ ನೈಬ್‌, ರಶೀದ್‌ ಖಾನ್‌.

 

Advertisement
Advertisement

Udayavani is now on Telegram. Click here to join our channel and stay updated with the latest news.

Next