Advertisement

ಅಫ್ಘಾನಿಸ್ಥಾನ ಟಿ20 ತಂಡಕ್ಕೆ ರಶೀದ್‌ ಖಾನ್‌  ನಾಯಕ

10:33 PM Jul 06, 2021 | Team Udayavani |

ಕಾಬುಲ್‌ : ಅಫ್ಘಾನಿಸ್ಥಾನ ಟಿ20 ತಂಡಕ್ಕೆ ನೂತನ ನಾಯಕರಾಗಿ ರಶೀದ್‌ ಖಾನ್‌ ಆಯ್ಕೆಯಾಗಿದ್ದಾರೆ. ನಜೀಬುಲ್ಲ ಜದ್ರಾನ್‌ ಉಪನಾಯಕರಾಗಿದ್ದಾರೆ. ಅಫ್ಘಾನಿಸ್ಥಾನ್‌ ಕ್ರಿಕೆಟ್‌ ಮಂಡಳಿ ಮಂಗಳವಾರ ಈ ಆಯ್ಕೆಯನ್ನು ಪ್ರಕಟಿಸಿತು.

Advertisement

“ತಂಡದ ನಾಯಕನನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಜತೆಗೆ ಜವಾಬ್ದಾರಿಯೂ ಹೆಚ್ಚಿದೆ. ನನ್ನ ನಾಯಕತ್ವದಲ್ಲಿ ತಂಡದ ಯಶಸ್ಸಿಗೆ ಶಕ್ತಿಮೀರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ರಶೀದ್‌ ಖಾನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next