Advertisement

Rasha Thadani: ರವೀನಾ ಟಂಡನ್‌ ಮಗಳ ಬಿಟೌನ್‌ ಎಂಟ್ರಿ

02:10 PM Jan 14, 2025 | Team Udayavani |

ಬಾಲಿವುಡ್‌ನ‌ಲ್ಲಿ ಸ್ಟಾರ್‌ ನಟ, ನಟಿಯರ ಮಕ್ಕಳು ಸಿನಿಮಾ ಜಗತ್ತಿಗೆ ಕಾಲಿಡುವುದು ಹೊಸದೇನಲ್ಲ. ವರ್ಷದಲ್ಲಿ ಒಂದಿಬ್ಬರಾದರೂ ಸ್ಟಾರ್‌ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಪ್ರವೇಶಿಸುತ್ತಾರೆ. ಈ ಬಾರಿಯ ಸರಣಿ ನಟಿ ರವೀನಾ ಟಂಡನ್‌ ಅವರದ್ದು. ಅವರ ಮಗಳು ರಾಶಾ ಟಂಡನ್‌ “ಆಝಾದ್‌’ ಚಿತ್ರದ ಮೂಲಕ ಬಿಟೌನ್‌ಗೆ ಎಂಟ್ರಿ ನೀಡುತ್ತಿದ್ದಾಳೆ.

Advertisement

ಇತ್ತೀಚೆಗೆ ಈಕೆಯ ಫೋಟೊವೊಂದು ಬಹಳ ವೈರಲ್‌ ಆಗಿತ್ತು. ಇನ್ನೂ 12ನೇ ತರಗತಿಯಲ್ಲಿ ಓದುತ್ತಿರುವ ರಾಶಾ, ಶೂಟಿಂಗ್‌ ಹಾಗೂ ಬೋರ್ಡ್‌ ಪರೀಕ್ಷೆ ತಯಾರಿಯನ್ನು ಒಟ್ಟೊಟ್ಟಿಗೆ ನಿಭಾಯಿಸುತ್ತಿದ್ದಾಳೆ.

ಅಭಿಷೇಕ್‌ ಕಪೂರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆಝಾದ್‌ ಚಿತ್ರದಲ್ಲಿ ಅಜಯ ದೇವಗನ್‌ ಜೊತೆ ರಾಶಾ ನಟಿಸುತ್ತಿದ್ದಾಳೆ. ಅಜಯ್‌ ಮಗ ಅಮನ್‌ ದೇವಗನ್‌ ಕೂಡ ಇದರಲ್ಲಿ ನಟಿಸುತ್ತಿರುವುದು ವಿಶೇಷ. ಜನವರಿ 17ರಂದು ಈ ಸಿನಿಮಾ ಬಿಡುಗಡೆ‌ ಗೊಳ್ಳಲಿದ್ದು, ತೆರೆಯ ಮೇಲೆ ರಾಶಾ ನಟನೆ ಯನ್ನು ನೋಡಲು ಬಿಟೌನ್‌ ಮಂದಿ ಕಾತುರದಿಂದ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.