ಬೇಕಾಗುವ ಸಾಮಗ್ರಿ:
ಇಬ್ಬುಡ್ಲ ಹೋಳು- 2 ಕಪ್, ಬೆಲ್ಲ-2 ಕಪ್, ತೆಂಗಿನಕಾಯಿ ತುರಿ- 2 ಕಪ್, ಏಲಕ್ಕಿ 3-4.
ತಯಾರಿಸುವ ವಿಧಾನ:
ಇಬ್ಬುಡ್ಲ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಮಾಡಿ ಒಂದು ಪಾತ್ರೆಗೆ ಹಾಕಿ. ಬೆಲ್ಲ ತುರಿದು ಹಾಕಿ ಏಲಕ್ಕಿ ಹುಡಿ ಹಾಕಿ ಬೆರೆಸಿಡಿ. ತೆಂಗಿನಕಾಯಿ ಹಾಲನ್ನು ಇಬ್ಬುಡ್ಲಕ್ಕೆ ಬೆರೆಸಿರಿ. ಇಡ್ಲಿ, ಕೊಟ್ಟೆ ಕಡುಬಿನೊಡನೆ ಸೇವಿಸಿದರೆ ಇನ್ನೂ ರುಚಿಯಾಗುವುದು. ಅವಲಕ್ಕಿ ಹಾಕಿ
ಸೇವಿಸಬಹುದು.
Advertisement
ಸೋರೆಕಾಯಿ ಹಲ್ವಬೇಕಾಗುವ ಸಾಮಗ್ರಿ:
ತುರಿದ ಸೋರೆಕಾಯಿ- 3 ಕಪ್, ಬೆಲ್ಲ- 2 ಕಪ್, ಏಲಕ್ಕಿ ಹುಡಿ, ತುಪ್ಪ- 2 ಚಮಚ, ಗೋಡಂಬಿ ಚೂರು ಸ್ವಲ್ಪ .
ತಯಾರಿಸುವ ವಿಧಾನ:
ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ನೀರು, ಬೆಲ್ಲ ಹಾಕಿ ಕುದಿ ಬಂದ ನಂತರ ತುರಿದ ಸೋರೆಕಾಯಿ, ತುಪ್ಪ ಹಾಕಿ ಚೆನ್ನಾಗಿ ಮಗುಚಿರಿ. ದಪ್ಪಗಾದಾಗ ಏಲಕ್ಕಿ ಹುಡಿ ಬೆರೆಸಿ ಬಟ್ಟಲಿಗೆ ತುಪ್ಪ ಸವರಿ ಸೋರೆಕಾಯಿ ಹಲ್ವ ಹಾಕಿ ಸಮತಟ್ಟು ಮಾಡಿ ಗೋಡಂಬಿಯಿಂದ ಅಲಂಕರಿಸಿರಿ. ಬಿಸಿಯಾಗಿಯೂ ಸವಿಯಬಹುದು. ತಣಿಸಿಯೂ ದೋಸೆ, ಚಪಾತಿಯೊಂದಿಗೆ ರುಚಿ ನೋಡಬಹುದು.