Advertisement

ಅದಾನಿಯಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ: ಕಿಶೋರ್‌ ಆಳ್ವ

11:44 AM Aug 02, 2024 | Team Udayavani |

ಪಡುಬಿದ್ರಿ: ಮುಂದಿನ ಎರಡು ವರ್ಷಗಳೊಳಗಾಗಿ ಉಡುಪಿ ಜಿಲ್ಲೆಯ ಕಾರ್ಕಳ, ಬೈಂದೂರುಗಳಿಗೆ ಅದಾನಿ ಲಿಕ್ವಿಡ್‌ ಗ್ಯಾಸ್‌ ಪೈಪ್‌
ಲೈನ್‌ ಸಂಪರ್ಕದ ಕಾಮಗಾರಿ ಪೂರ್ಣಗೊಳ್ಳಲಿದೆ. ಮಂಗಳೂರು ಅದಾನಿ ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಟರ್ಮಿ ನಲ್‌ಗ‌ಳ ಪ್ರತ್ಯೇಕತೆಯೊಂದಿಗೆ ವಿಸ್ತರಣೆ, ಬೈಕಂಪಾಡಿಯಲ್ಲಿ ಅದಾನಿ ಸಿಮೆಂಟ್‌ ಘಟಕ ಆರಂಭ ಮುಂತಾದವುಗಳ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅದಾನಿ ಸಮೂಹದ ದಕ್ಷಿಣ ಭಾರತ
ಅಧ್ಯಕ್ಷ ಕಿಶೋರ್‌ ಆಳ್ವ ಹೇಳಿದರು.

Advertisement

ಅವರು ಪಡುಬಿದ್ರಿಯ ಬಂಟರ ಸಂಘದ ಬಯಲು ಸಭಾಮಂದಿರದಲ್ಲಿ ಅದಾನಿ ಫೌಂಡೇಶನ್‌ ಮತ್ತು ಅದಾನಿ ಪವರ್‌ – ಉಡುಪಿ ಟಿಪಿಪಿ ಸಿಎಸ್‌ಆರ್‌ನ ಸುಮಾರು 60 ಲಕ್ಷ ರೂ. ಗಳ ಮೂಲಕ ಯೋಜನಾ ಪ್ರದೇಶದ ಸುತ್ತಮುತ್ತಲಿನ 50 ಕನ್ನಡ ಮಾಧ್ಯಮ
ಪ್ರಾಥಮಿಕ ಶಾಲೆಗಳು ಹಾಗೂ 26 ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಸುಮಾರು 6,800 ವಿದ್ಯಾರ್ಥಿಗಳಿಗೆ ವಿತರಿಸಲಾದ ಶೈಕ್ಷಣಿಕ ಪರಿಕರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮಾಧ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಯೋಜನೆಗೆ ತಮ್ಮ ಪ್ರಧಾನ ಕಚೇರಿ ಒಪ್ಪಿಗೆ ನೀಡಿದೆ. ಗ್ರಾಮೀಣ ಭಾಗದಲ್ಲಿ ಅನಕ್ಷರತೆಯ ನಿರ್ಮೂಲಕ್ಕೂ ಸಿಎಸ್‌ಆರ್‌ ಯೋಜನೆ ಮೂಲಕ ಅದಾನಿ ಸಂಸ್ಥೆ ಹೆಚ್ಚಿನ ಒತ್ತನ್ನು ನೀಡುತ್ತಿದೆ ಎಂದೂ ಅವರು ಹೇಳಿದರು.

ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ|ದೇವಿಪ್ರಸಾದ್‌ ಶೆಟ್ಟಿ ಬೆಳಪು, ಕಾಪು ತಾಲೂಕು ಯುವಜನಸೇವಾ ಮತ್ತು ಕ್ರೀಡಾ ಅಧಿಕಾರಿ ರಿತೇಶ್‌ ಕುಮಾರ್‌ ಶೆಟ್ಟಿ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ವೈ. ಮೊದಲಾದವರು ಮಾತನಾಡಿದರು.

ವಿವಿಧ ಗ್ರಾ. ಪಂ. ಅಧ್ಯಕ್ಷರಾದ ನಮಿತಾ ಮುದರಂಗಡಿ, ಶಿವಕುಮಾರ್‌ ಮೆಂಡನ್‌, ಸುರೇಖಾ, ಜನಾರ್ದನ ಆಚಾರ್ಯ, ರೇಶ್ಮಾ ಮೆಂಡನ್‌, ಮಮತಾ ಡಿ. ಪೂಂಜ, ಎಲ್ಲೂರು ಪಂಚಾಯತ್‌ ಉಪಾಧ್ಯಕ್ಷೆ ಉಷಾ ಕೋಟ್ಯಾನ್‌ ಹಾಗೂ ಯೋಜನಾ ಪ್ರದೇಶದ ಸುತ್ತಮುತ್ತಲಿನ ವಿವಿಧ ಶಾಲೆಗಳು ಮುಖ್ಯೋಪಾಧ್ಯಾಯರು ವೇದಿಕೆಯಲ್ಲಿದ್ದರು.

Advertisement

ಅದಾನಿ ಪವರ್‌ – ಉಡುಪಿ ಟಿಪಿಪಿಯ ಎಜಿಎಂ ರವಿ ಆರ್‌. ಜೇರೆ ಸ್ವಾಗತಿಸಿದರು. ಪ್ರಾಧ್ಯಾಪಕ ಸುಧಾಕರ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಅದಾನಿ ಫೌಂಡೇಶನ್‌ನ ಅನುದೀಪ್‌, ಧೀರಜ್‌, ಶುಭಮಂಗಳಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿತರಿಸಲಾದ ಶೈಕ್ಷಣಿಕ ಪರಿಕರಗಳಲ್ಲಿ ನೋಟ್‌ ಪುಸ್ತಕ, ರೇಖಾ ಗಣಿತದ ಪೆಟ್ಟಿಗೆ, ಬ್ಯಾಗ್‌, ಕೊಡೆ ಇತ್ಯಾದಿಗಳಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next