Advertisement

ಅಪರೂಪದ ಬಿಳಿಗೂಬೆ ಪ್ರತ್ಯಕ್ಷ 

04:02 PM Nov 12, 2018 | |

ಕಾರವಾರ: ನಗರದ ಸೇಂಟ್‌ ಮೈಕಲ್‌ ಕಾನ್ವೆಂಟ್‌ ಬಳಿ ಅಪರೂಪದ ಬಿಳಿ ಗೂಬೆ ಮರಿಯೊಂದು ಪ್ರತ್ಯಕ್ಷವಾಗಿದ್ದು, ಇದನ್ನು ವೀಕ್ಷಿಸಲು ಜನರು ಜಮಾಯಿಸಿದ್ದರು. ಶಾಲೆ ಪ್ರವೇಶ ದ್ವಾರದ ಬಳಿ ಕಂಡುಬಂದ ಬಿಳಿ ಗೂಬೆಯನ್ನು ರಕ್ಷಿಸಿದ ಶಾಲೆ ಸಿಬ್ಬಂದಿ, ಪಂಜರದೊಳಗೆ ಸುರಕ್ಷಿತವಾಗಿಟ್ಟಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್‌ ಕ್ಯಾಮೆರಾಗಳಲ್ಲಿ ಬಿಳಿಗೂಬೆ ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೋಹನ ನಾಯ್ಕ ಹಾಗೂ ಪಕ್ಷಿ ತಜ್ಞ ಗೋಪಾಲ ನಾಯ್ಕ ಅದನ್ನು ಮೊದಲಿದ್ದ ಜಾಗಕ್ಕೆ ತಂದು ಬಿಟ್ಟರು. 

Advertisement

ರಾತ್ರಿ ವೇಳೆಯಲ್ಲಿ ಇವುಗಳು ಹೆಚ್ಚು ಚುರುಕಾಗಿರುತ್ತವೆ. ಅದರ ತಾಯಿ ರಾತ್ರಿ ಸಮಯದಲ್ಲಿ ಬರಬಹುದು. ಹೀಗಾಗಿ ಮರಿಯು ಇದ್ದ ಜಾಗದಲ್ಲೇ ಇದ್ದರೆ ಅದನ್ನು ಕೊಂಡೊಯ್ಯಬಹುದು ಎಂದು ಅವರು ಅಭಿಪ್ರಾಯಪಟ್ಟರು. ಸುಮಾರು ಒಂದು ವಾರದ ಮರಿ ಇದಾಗಿದೆ. ‘ಬಾರನ್‌ ಔಲ್‌’ ಎಂದು ಇದಕ್ಕೆ ಕರೆಯಲಾಗುತ್ತದೆ. ಬಿಳಿ ಗೂಬೆ ಇಲಿ, ಏಡಿ, ಸಣ್ಣಪುಟ್ಟ ಕೀಟಗಳನ್ನು ಹಿಡಿದು ತಿನ್ನುತ್ತಾ ಬದುಕುತ್ತವೆ ಎಂದು ಗೋಪಾಲ್‌ ನಾಯ್ಕ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next