Advertisement
5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಫ್ರಂಟ್‌ಲೈನ್ ಆಟಗಾರರಿಗೆ ಭಾರತ ವಿಶ್ರಾಂತಿ ನೀಡಿತ್ತು. ಕೆ.ಎಲ್. ರಾಹುಲ್ ನಾಯಕತ್ವದ ಯುವ ತಂಡ ಏನು ಸಾಧಿಸೀತು ಎಂಬ ಆತಂಕ ಸಹಜವಾಗಿಯೇ ಕಾಡಿತ್ತು. ಆದರೆ ಅವಕಾಶ ಪಡೆದ ಆಟಗಾರರೆಲ್ಲ ಇದನ್ನು ಎರಡೂ ಕೈಗಳಲ್ಲಿ ಬಾಚಿಕೊಂಡರು. ಎರಡೂ ಪಂದ್ಯಗಳಲ್ಲಿ ಭಾರತ ಮಹೋನ್ನತ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿತು.
Related Articles
ಆಸ್ಟ್ರೇಲಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕೆಲವು ತಿಂಗಳ ಹಿಂದೆ ಇದೇ ತಂಡ ಭಾರತವನ್ನು 2-1ರಿಂದ ಮಣಿಸಿತ್ತು. ಆಗ ಮಿಚೆಲ್ ಸ್ಟಾರ್ಕ್ ಘಾತಕವಾಗಿ ಕಾಡಿದ್ದರು. ರಾಜ್‌ಕೋಟ್‌ನಲ್ಲಿ ಸ್ಟಾರ್ಕ್ ಆಡಲಿದ್ದಾರೆ. ಇವರು ಆಸ್ಟ್ರೇಲಿಯವನ್ನು ಕ್ಲೀನ್‌ಅಪರೂಪದ ಕ್ಲೀನ್‌ಸ್ವೀಪ್ ಅವಕಾಶ ಮರಳಿ ರೋಹಿತ್ ಸಾರಥ್ಯ ಕಾಂಗರೂಗೆ ವೈಟ್‌ವಾಶ್ ಭೀತಿಪ್ ಸಂಕಟದಿಂದ ಪಾರುಮಾಡಬಲ್ಲರೇ? ಪ್ರಶ್ನೆ ಸಹಜ.
Advertisement
ಇಂದೋರ್‌ನಂತೆ ರಾಜ್‌ಕೋಟ್‌ನಲ್ಲೂ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸುವ ತಂಡಕ್ಕೆ ಲಾಭ ಹೆಚ್ಚು ಎನ್ನಬಹುದು.