Advertisement

ಪತನದಂಚಿನ ಪತಂಗ ಪ್ರತ್ಯಕ್ಷ! 

03:19 PM Sep 26, 2022 | Team Udayavani |

ಚನ್ನಪಟ್ಟಣ: ಪತನದ ಅಂಚಿನಲ್ಲಿರುವ ಪ್ರಭೇದಕ್ಕೆ ಸೇರಿದ ಅಟ್ಲಾಸ್‌ ಪತಂಗ ತಾಲೂಕಿನಲ್ಲಿ ಪ್ರತ್ಯಕ್ಷವಾಗಿದೆ. ಅಬ್ಬೂರು ಗ್ರಾಮದ ಮಧು ಎಂಬುವವರ ತೋಟದ ಮನೆ ಬಳಿ ಇದು ಕಂಡುಬಂದಿದ್ದು, ಪರಿಸರ ಪ್ರೇಮಿಯೊಬ್ಬರು ಇದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

Advertisement

ಅಟ್ಲಾಸ್‌ ಪತಂಗ ಹತ್ತರಿಂದ ಹದಿನೈದು ದಿನ ಬದುಕುವ ಅಲ್ಪಾವಧಿಯ ಕೀಟ. ಪಶ್ಚಿಮ ಘಟ್ಟದಂತಹ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಪ್ರಪಂಚದ ಅತಿದೊಡ್ಡ ಗಾತ್ರದಕೀಟಗಳ ಜಾತಿಗೆ ಸೇರಿದ್ದು, ರೆಕ್ಕೆಗಳಿಗೆ ಹೋಲಿಸಿದರೆ ಇದರ ದೇಹವು ಚಿಕ್ಕದಾಗಿರುತ್ತದೆ.

ಹಾವಿನ ರೂಪದ ರೆಕ್ಕೆಗಳು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ಪತಂಗಗಳು ನಿಶಾಚರಿಯಾಗಿದ್ದು, ರಾತ್ರಿ ವೇಳೆ ಹೆಚ್ಚು ಹಾರಾಡುತ್ತವೆ. ಆಕರ್ಷಿಸಲ್ಪಡುವ ಪತಂಗಗಳಿಗೆ ವಿರೋಧಿಗಳು ಹೆಚ್ಚು. ಹಾಗಾಗಿ, ರೆಕ್ಕೆಗಳ ಸುಳಿಗಳು ನಾಗರ ಹಾವಿನ ತಲೆಯಂತಿದ್ದು, ಪ್ರಾಣಿ ಅಥವಾ ಪಕ್ಷಿ ಬೇಟೆಯಾಡಲು ಬಂದಾಗ, ರೆಕ್ಕೆಗಳನ್ನು ಮೇಲಕ್ಕೆತ್ತಿ ಹಾವು ಅಥವಾ ಜಂತುಗಳ ರೀತಿಯಲ್ಲಿ ಕಾಣುವಂತೆ ಮಾಡಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತದೆ. ಮರಿ ಹುಳುಗಳು ಹಕ್ಕಿಗಳಿಗೆ ಆಹಾರವಾದರೆ, ಪ್ರೌಢ ಪತಂಗಗಳನ್ನು ಬಾವಲಿ, ಗೂಬೆ, ಹಲ್ಲಿ, ಬೆಕ್ಕು, ಕರಡಿ ಭಕ್ಷಿಸುತ್ತವೆ ಎನ್ನಲಾಗಿದೆ.

ದೇಹದಲ್ಲಿರುವ ದೈಹಿಕ ಒಳ ಶಕ್ತಿಯಿಂದ ಬೆಳಕಿಗೆ ಜೀವಿಸುವ ಇವುಗಳಿಗೆ ಪ್ರೌಢಾವಸ್ಥೆ ಬಳಿಕ ಕೇವಲ 10ರಿಂದ 15ದಿನಬದುಕಿರುತ್ತವೆ. ಈ ಪತಂಗಗಳನ್ನು ಬಹುತೇಕ ಮಂದಿ ಚಿಟ್ಟೆಅಥವಾ ಪಾತರಗಿತ್ತಿ ಎಂದೇ ಭಾವಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು.

ತಾಲೂಕಿನಲ್ಲಿ ಇದೇ ಮೊದಲು: ಇಂದೊಂದು ನಶಿಸುತ್ತಿರುವ ಪ್ರಭೇದಕ್ಕೆ ಸೇರಿದ ಪತಂಗವಾಗಿದೆ. ನಮ್ಮ ಭಾಗದಲ್ಲಿ ಇದು ಕಾಣಸಿಗುತ್ತಿರುವುದು ಇದೇ ಮೊದಲು. ಈ ಪತಂಗ ಹಲವುವಿಶೇಷಗಳಿಂದ ಕೂಡಿದೆ. ಆರಂಭದ ದಿನಗಳಲ್ಲಿ ಇದು ಏನನ್ನೂತಿನ್ನುವುದಿಲ್ಲ. ವಿಶೇಷವಾದ ರಕ್ಷಣಾ ವಿಧಾನ ಹೊಂದಿದೆ. ಇದರಎರಡೂ ರೆಕ್ಕೆಯ ತುದಿ ಹಾವಿನ ಆಕಾರದಲ್ಲಿರುವುದು ಈ ಪತಂಗದಬಹುಮಖ್ಯ ಆಕರ್ಷಣೆ. ಇಂತಹ ಪತಂಗ ಕಂಡು ಬಂದಾಗ ಹಾನಿ ಮಾಡಬಾರದು ಎಂದು ಅರಣ್ಯ ಅಧಿಕಾರಿ ದಿನೇಶ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next