ಹೊಸದಿಲ್ಲಿ: ಒಡಿಶಾದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಹುಲಿಯೊಂದರ ಅಪರೂಪದ ವಿಡಿಯೋ ಇದೀಗ ವೈರಲ್ ಆಗಿದೆ.
ಅಂತಾರಾಷ್ಟ್ರೀಯ ಹುಲಿಗಳ ದಿನದ ಸಂದರ್ಭದಲ್ಲಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ 15 ಸೆಕೆಂಡುಗಳ ಕ್ಲಿಪ್ ನಲ್ಲಿ ಮರದ ಮೇಲೆ ಗೀರುಗಳನ್ನು ಬಿಡುತ್ತಿರುವುದು ಕಂಡುಬಂದಿದೆ.
“ಅಂತಾರಾಷ್ಟ್ರೀಯ ಹುಲಿಗಳ ದಿನದಂದು ಅಪರೂಪದ ಮೆಲನಿಸ್ಟಿಕ್ ಹುಲಿಯೊಂದು ತನ್ನ ಸ್ಥಳವನ್ನು ಗುರುತಿಸುವ ಆಸಕ್ತಿದಾಯಕ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ” ಎಂದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಬರೆದು ಕೊಂಡಿದ್ದಾರೆ.
ಇದನ್ನೂ ಓದಿ:ರಾಜ್ಯದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮವನ್ನು ಪ್ರಶಂಸಿದ ಪ್ರಧಾನಿ ಮೋದಿ
ವಿಶಿಷ್ಟವಾದ ಡಾರ್ಕ್ ಸ್ಟ್ರೈಪ್ ಮಾದರಿಯ ಕಪ್ಪು ಅಥವಾ ಮೆಲನಿಸ್ಟಿಕ್ ಹುಲಿಗಳು ಅತ್ಯಂತ ಅಪರೂಪದ್ದಾಗಿದೆ. ಇಲ್ಲಿಯವರೆಗೆ ಈ ಹುಲಿಗಳು ಒಡಿಶಾದ ಸಿಮಿಲಿಪಾಲ್ ನಲ್ಲಿ ಮಾತ್ರ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಟ್ವಿಟರ್ ನಲ್ಲಿ ಆಸಕ್ತಿದಾಯಕ ವನ್ಯಜೀವಿ ವೀಡಿಯೊಗಳನ್ನು ಹಂಚಿಕೊಂಡು ಹೆಸರುವಾಸಿಯಾಗಿರುವ ಅಧಿಕಾರಿ ಸುಸಂತ ನಂದಾ, ಕಪ್ಪು ಹುಲಿಗಳು ವಿಶಿಷ್ಟವಾದ ಜೀನ್ ಪೂಲ್ ಅನ್ನು ಹೊಂದಿವೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅವುಗಳ ಸಂಖ್ಯೆ ಚೇತರಿಕೆ ಕಾಣುತ್ತಿದೆ ಎಂದು ಹೇಳಿದರು.