Advertisement

ವಾಡಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಪಥ ಸಂಚಲನ

10:47 AM Oct 05, 2018 | Team Udayavani |

ವಾಡಿ: 55 ಜನರಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್‌) ಕಮಾಂಡೋಗಳು ಹಾಗೂ 30ಕ್ಕೂ ಹೆಚ್ಚು ಸ್ಥಳೀಯ
ಪೊಲೀಸರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಪಥ ಸಂಚಲನ ನಡೆಸಿದರು.

Advertisement

ಹೈದ್ರಾಬಾದದಿಂದ ಪಟ್ಟಣಕ್ಕೆ ಬಂದಿದ್ದ ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ (ಆರ್‌ ಎಎಫ್‌) ಬಸವೇಶ್ವರ ವೃತ್ತ, ರೈಲು ನಿಲ್ದಾಣ, ಅಂಬೇಡ್ಕರ್‌ ವೃತ್ತ, ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ಚೌಕ್‌, ಕಾಕಾ ಚೌಕ್‌, ಶಿವಾಜಿ ಚೌಕ್‌, ನೇತಾಜಿ ನಗರ ಮಾರ್ಗವಾಗಿ ಶ್ರೀನಿವಾಸ ಗುಡಿ ವೃತ್ತದವರೆಗೆ ಸಂಚರಿಸಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ, ಉಗ್ರವಾದಿಗಳ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಈ ಪಥ ಸಂಚಲನ ನಡೆಸಿಲ್ಲ. ಬದಲಿಗೆ ಪ್ರತಿವರ್ಷ ಗುರುತಿಸಲಾದ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಆರ್‌ ಎಎಫ್‌ ಕಮಾಂಡೋಗಳ ಪಥ ಸಂಚಲನ ನಡೆಸಲಾಗುತ್ತಿದೆ. ಜನಸ್ನೇಹಿ ಪೊಲೀಸ್‌ ನಿಯಮಗಳು ಜಾರಿಗೆ ಬಂದ ಮೇಲೆ ಅಪರಾಧ ಪ್ರಕರಣಗಳು ಸಾಕಷ್ಟು ನಿಯಂತ್ರಣಕ್ಕೆ ಬಂದಿವೆ. ಹಿಂದೆ ಘಟಿಸುತ್ತಿದ್ದಷ್ಟು ಕೋಮು ಗಲಭೆಗಳು ಈಗ ಸಂಭವಿಸುತ್ತಿಲ್ಲ ಎಂದರು.

ಜನರು ಮತ್ತು ಪೊಲೀಸರ ನಡುವೆ ಉಂಟಾಗಿರುವ ಆತ್ಮವಿಶ್ವಾಸ ಸಮಾಜಘಾತುಕ ಮನಸ್ಸುಗಳ ಪರಿವರ್ತನೆ
ಮಾಡುವಲ್ಲಿ ಯಶಸ್ವಿಯಾಗಿದೆ. ಪೊಲೀಸ್‌ ಇಲಾಖೆ ಸದಾಕಾಲ ಜನರ ಜತೆಗಿದೆ ಎಂಬುದನ್ನು ಖಾತ್ರಿಪಡಿಸಲು
ಭದ್ರತಾ ಪಡೆಗಳಿಂದ ಪಥ ಸಂಚಲನ ನಡೆಸಲಾಗುತ್ತಿದೆ ಎಂದರು. 

ಪಟ್ಟಣದ ಪೊಲೀಸ್‌ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ, ಆರ್‌ಎಎಫ್‌ ಸಹಾಯಕ ಕಮಾಂಡೋ ರೂಪೇಶ ಆರ್‌.ಎಸ್‌., ಜೀತೇಂದ್ರ ಕುಮಾರ, ಅಭಿಷೇಕ ಸಹಾಯ್‌, ವಿ. ನಾರಾಯಣನ್‌ ಪಥ ಸಂಚಲನದ ನೇತೃತ್ವ ವಹಿಸಿದ್ದರು.

Advertisement

18 ವರ್ಷಗಳ ಹಿಂದೆ ಚರ್ಚ್‌ನಲ್ಲಿ ಸ್ಫೋಟ ಕಳೆದ 18 ವರ್ಷಗಳ ಹಿಂದೆ ವಾಡಿ ಪಟ್ಟಣದ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಬಾಂಬ್‌ ಸ್ಫೋಟಗೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿದ ಕಮಾಂಡೋ ಮುಖ್ಯಸ್ಥರು ಮಾಹಿತಿ ಕಲೆ ಹಾಕಿದರು. 2000ನೇ ಇಸ್ವಿಯ ಜೂನ್‌ 8 ರಂದು ಬೆಳಗ್ಗೆ 6:10ಕ್ಕೆ ಚರ್ಚ್‌ನ ಪ್ರಾರ್ಥನಾ ಸ್ಥಳದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ನಂತರ ಮೂರು ತಾಸಿನ ಬಳಿಕ 9:10ಕ್ಕೆ ಚರ್ಚ್‌ ಅಂಗಳದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸಾವು ನೋವುಗಳು ಸಂಭವಿಸಿರಲಿಲ್ಲ. ಆದರೆ ಚರ್ಚ್‌ನ ಕಿಟಕಿ ಗಾಜುಗಳು ಪುಡಿಪುಡಿಯಾಗಿ ಸ್ಥಳದಲ್ಲಿದ್ದ ನಾಮದೇವ ಹಾಗೂ ಎಸ್‌.ಪೀಟರ್‌ ಎನ್ನುವರಿಗೆ ಗಾಯಗಳಾಗಿದ್ದವು. 

ಯೋಧರು-ಪೋಲಿಸರಿಂದ ಪಥ ಸಂಚಲನ
ಶಹಾಬಾದ: ನಗರದಲ್ಲಿ ಗುರುವಾರ ಡಿವೈಎಸ್‌ಪಿ ನೇತೃತ್ವದಲ್ಲಿ ತೆಲಂಗಾಣದ ತುರ್ತು ಕಾರ್ಯಾಚರಣೆ ಸೇನಾ ಪಡೆಯ ಸುಮಾರು 50ಕ್ಕೂ ಹೆಚ್ಚು ಯೋಧರು ಮತ್ತು ಪೊಲೀಸ್‌ ಅಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.

ನಗರ ಪೊಲೀಸ್‌ ಠಾಣೆಯಿಂದ ಪ್ರಾರಂಭವಾದ ಪಥ ಸಂಚಲನ ಮಜ್ಜಿದ್‌ ವೃತ್ತ, ಬೆಂಡಿ ಬಜಾರ್‌, ಸುಭಾಷ ವೃತ್ತ, ವಿಪಿ ಚೌಕ್‌, ಭಾರತ್‌ ಚೌಕ್‌, ರೈಲ್ವೆ ನಿಲ್ದಾಣ, ನೆಹರು ವೃತ್ತ, ತ್ರಿಶೂಲ್‌ ಚೌಕ್‌ ನಂತರ ಮಜ್ಜಿದ್‌ ಚೌಕ್‌ ಮುಖಾಂತರ ಪೊಲೀಸ್‌ ಠಾಣೆಗೆ ಆಗಮಿಸಿತು.
 
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್‌ಪಿ ಕೆ. ಬಸವರಾಜ ನಗರಕ್ಕೆ ತುರ್ತು ಕಾರ್ಯಾಚರಣೆ ಪಡೆ (ಆರ್‌ಎಎಫ್‌) ಬಂದಿದ್ದು, ಇವರ ಪಥಸಂಚಲನದಿಂದ ಸಾರ್ವಜನಿಕರಲ್ಲಿ ಆಸ್ತಿ -ಪಾಸ್ತಿ ಹಾಗೂ ಜೀವ ರಕ್ಷಣೆಯ ಆತ್ಮ ವಿಶ್ವಾಸ ಮೂಡುತ್ತದೆ ಎಂದರು.

ನಗರದಲ್ಲಿರುವ ಕಾರ್ಖಾನೆಗಳು, ಸೂಕ್ಷ್ಮ ಪ್ರದೇಶಗಳು, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ನಗರದ ವ್ಯಾಪ್ತಿಯಲ್ಲಿರುವ ಪೊಲೀಸ್‌ ಠಾಣೆಗಳ ವಿವರಗಳನ್ನು ಪಡೆದು ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ಮಾಡಲು ಪಥಸಂಚಲನದಿಂದ ಸಹಾಯಕವಾಗುತ್ತದೆ. ಸಮಾಜದಲ್ಲಿ ಶಾಂತಿ ಕದಡಿದಾಗ ಸೇನಾ ಪಡೆ ನಮಗೆ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಪಿಐ ಕಪಿಲದೇವ, ಕಾರ್ಯಾಚರಣೆ ಸೇನಾ ಪಡೆ ಮುಖ್ಯಸ್ಥ ರೂಪೇಶ ಆರ್‌.ಎಸ್‌., ಆರಕ್ಷಕ ಡಿಎನ್‌ಆರ್‌ ಬಲರಾಜಸಿಂಗ್‌, ಆರಕ್ಷಕ ಡಿ.ಅನಾ, ಜಿತೇಂದ್ರಕುಮಾರ,ಅಭಿಷೇಕ ಸಾಹೇಬ, ವಿ.ನಾರಾಯಣ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next