ಹೊಸದಿಲ್ಲಿ: ದೇಶಾದ್ಯಂತ ಎಲ್ಲ ವಿಭಾಗಗಳಲ್ಲೂ ಕ್ಯಾಶ್‌ಲೆಸ್ ವ್ಯವಸ್ಥೆ ಜಾರಿಯಿದ್ದರೂ ಭಾರತೀಯ ರೈಲ್ವೇಮಾತ್ರ ಈ ವಿಚಾ ರದಲ್ಲಿ ಹಿಂದೆ ಉಳಿದುಕೊಂಡಿತ್ತು. ಇದೀಗ ಪ್ರಯಾಣಿಕರಿಗೆ ನೆರವಾಗಲು ರೈಲ್ವೇ ಮುಂದಾಗಿದ್ದು, ರೈಲು ನಿಲ್ದಾಣಗಳ ಕೌಂಟ ರ್‌ಗಳಲ್ಲಿ ರಿಸರ್ವೇಶನ್ ಅಲ್ಲದ ಟಿಕೆಟ್‌ಗಳನ್ನು ಕೊಳ್ಳಲು ಶೀಘ್ರವೇ ಕ್ಯುಆರ್‌ಕೋಡ್ ವ್ಯವಸ್ಥೆ ತರಲು ಮುಂದಾಗಿದೆ.
ಪೂರ್ವ ರೈಲ್ವೇ ವಲಯದ ಮಾಲ್ಡಾ ಡಿವಿಷನ್ ಕ್ಯುಆರ್‌ಕೋಡ್ ವ್ಯವಸ್ಥೆ ಜಾರಿ ಮಾಡಲು ಮುಂದಾ ಗಿದ್ದು, ತನ್ನ ಅಧೀನದಲ್ಲಿರುವ ಎಲ್ಲ ನಿಲ್ದಾಣಗಳಲ್ಲಿ ಇದನ್ನು ಅನುಷ್ಠಾನ ಮಾಡಲಿದೆ ಎನ್ನಲಾಗಿದೆ.
ಹೇಗೆ ಕಾರ್ಯನಿರ್ವಹಿಸಲಿದೆ?: ಟಿಕೆಟ್ ಕೊಳ್ಳಲು ಹೋದಾಗ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್ ಬಳಿ ಇರುವ ಮಾನಿಟರ್‌ನಲ್ಲಿ ಕ್ಯುಆರ್ ಕೋಡ್ ಕಾಣಿಸಿಕೊಳ್ಳಲಿದೆ. ಪ್ರಯಾಣಿಕರು ಈ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಎಷ್ಟು ಹಣ ಪಾವತಿಸಬೇಕು ಎಂಬುದು ಅದರಲ್ಲಿ ಕಾಣಿಸಿಕೊಳ್ಳಲಿದೆ. ಹಣ ಪಾವ ತಿಸಿ ಟಿಕೆಟ್ ಪಡೆದುಕೊಳ್ಳಬಹುದು.
ಈ ಯೋಜನೆಯ ಅನುಷ್ಠಾನದಿಂದ ಸದಾ ನಗದು ಕೊಂಡೊಯ್ಯಬೇಕಾದ ಪರಿಸ್ಥಿತಿಯಿಂದ ಪ್ರಯಾ ಣಿಕರು ಮುಕ್ತಿ ಪಡೆದುಕೊಳ್ಳಲಿದ್ದಾರೆ. ಚಿಲ್ಲರೆ ನೀಡಲು ಉಂಟಾಗುವ ಸಮಸ್ಯೆಗಳು ಪರಿಹಾರವಾಗಲಿದೆ.
ಅಪಾಯದ ಮಟ್ಟಕ್ಕೆ ಯಮುನಾ ನದಿ: ರಾಷ್ಟ್ರ ರಾಜಧಾನಿ ದಿಲ್ಲಿಗೆ ಪ್ರವಾಹ ಭೀತಿ
ಹೊಸದಿಲ್ಲಿ: ಹಳೆ ದಿಲ್ಲಿಯ ರೈಲ್ವೇ ಸೇತುವೆಯ ಬಳಿ ಯಮುನಾ ನದಿ ಅಪಾಯ ಮಟ್ಟದ ಸಮೀಪದಲ್ಲಿ ಹರಿಯುತ್ತಿದ್ದು, ಸದ್ಯದಲ್ಲೇ ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆಗಳಿವೆ.
ಸದ್ಯ ಇಲ್ಲಿ ನದಿಯ ನೀರಿನ ಅಪಾಯದ ಮಟ್ಟ 204.5 ಮೀ.ಗಳಾಗಿದ್ದು, ಮಂಗ ಳ ವಾರ ಮಧ್ಯಾಹ್ನ ಇದು 204.35 ಮೀ.ಗೆ ತಲು ಪಿದೆ. ದಿಲ್ಲಿಗೆ ಪ್ರವಾಹ ಭೀತಿ ಶುರು ವಾ ಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೇ ಎಂಜಿನಿಯರ್‌ಗಳು ಪರಿಸ್ಥಿತಿಯನ್ನು ಅವ ಲೋಕಿಸುತ್ತಿದ್ದು, ಸದ್ಯ ಎಲ್ಲಿಯೂ ರೈಲ್ವೇ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿಲ್ಲ. ಅಲ್ಲದೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಯಮುನೆಯ ಪಾತ್ರದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.