Advertisement

ಪ್ರಧಾನಿ ಮೋದಿ ಆಡಳಿತದಲ್ಲಿ ಅಭಿವೃದ್ಧಿಗೆ ಶರವೇಗ: ನಡ್ಡಾ

12:10 AM Feb 22, 2023 | Team Udayavani |

ಚಿಕ್ಕಮಗಳೂರು: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿದೆ. ಅಭಿವೃದ್ಧಿ ಕಾರ್ಯಗಳು ಶರವೇಗ ಪಡೆದುಕೊಂಡಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ವೃತ್ತಿಪರ ಮತ್ತು ಚಿಂತಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಂಬತ್ತು ವರ್ಷಗಳ ಹಿಂದೆ ದೇಶದ ಪರಿಸ್ಥಿತಿ ಹೇಗಿತ್ತು ಎಂದು ಊಹಿಸಿಕೊಂಡರೆ ಭ್ರಷ್ಟಾಚಾರ ಎಲ್ಲೆ ಮೀರಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಕೀಳಾಗಿ ಕಾಣಲಾಗುತ್ತಿತ್ತು ಎಂದು ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಅವರು ಜರಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅವರು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಿಂದ ದೇಶ ಪ್ರಗತಿಪಥದತ್ತ ಸಾಗುತ್ತಿದೆ. ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದು, ಇದಕ್ಕೆಲ್ಲ ಮೋದಿಯವರ ಡೈನಾಮಿಕ್‌ ನಾಯಕತ್ವವೇ ಕಾರಣ ಎಂದು ಬಣ್ಣಿಸಿದರು.

ದೇಶದಲ್ಲಿ ಅನೇಕ ಪಕ್ಷಗಳು ಆಡಳಿತ ನಡೆಸಿವೆ. ಆಗ ದೇಶ ಹೇಗಿತ್ತು. ಮೋದಿ ಬಂದ ಮೇಲೆ ದೇಶ ಹೇಗಿದೆ ಎಂದು ಯೋಚಿಸಬೇಕಿದೆ. ಕೋವಿಡ್‌ ಸಂದರ್ಭ, ಉಕ್ರೇನ್‌ ಮತ್ತು ರಷ್ಯಾ ಯುದ್ಧ ಸಂದರ್ಭ ದೇಶ ಆರ್ಥಿಕವಾಗಿ ದುರ್ಬಲವಾಗದೆ ಹಲವು ದೇಶಗಳಿಗೆ ನೆರವು ನೀಡಿದೆ ಎಂದು ಹೇಳಿದರು.

Advertisement

ಭಾರತ ದೇಶದ ಜಿಡಿಪಿ 7.4ರಷ್ಟಿದೆ. ಅಮೆರಿಕ 2.3, ಚೀನ 3.3, ಫ್ರಾನ್ಸ್‌ 1.5ರಷ್ಟಿದೆ. ಆರ್ಥಿಕವಾಗಿ ದೇಶ ಸದೃಢವಾಗಿದ್ದು, ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೋವಿಡ್‌ ಸಂದರ್ಭ ಜನರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲಾಗಿದೆ ಎಂದರು.

ಸಿದ್ದು ವಿರುದ್ಧ ಹರಿಹಾಯ್ದ ನಡ್ಡಾ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಅವ ಧಿಯಲ್ಲಿ ಭ್ರಷ್ಟಾಚಾರ, ಒಡೆದು ಆಳುವ ನೀತಿ ಅನುಸರಿಸಿದರು. ನಾವು ಪಿಎಫ್‌ಐ ಸಂಘಟನೆಯನ್ನು ಬ್ಯಾನ್‌ ಮಾಡಿದರೆ ಸಿದ್ದರಾಮಯ್ಯ ಸರಕಾರ ಪಿಎಫ್‌ಐ ಸಂಘಟನೆ ಮುಖಂಡರ ಮೇಲಿದ್ದ 175 ಪ್ರಕರಣವನ್ನು ಹಿಂಪಡೆಯಿತು. ಲೋಕಾಯುಕ್ತವನ್ನು ಮುಚ್ಚುವ ಕೆಲಸ ಮಾಡಿದರು ಎಂದರು.

ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ
ಶೃಂಗೇರಿ: ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಿರುವುದು ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆದಿರುವುದು ಅತ್ಯಂತ ಸಂತೋಷದಾಯಕವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಶ್ರೀ ಶಾರದಾ ಪೀಠಕ್ಕೆ ಸೋಮವಾರ ಆಗಮಿಸಿ ವಾಸ್ತವ್ಯ ಹೂಡಿದ್ದ ಅವರು ಮಂಗಳವಾರ ಕೊರಡಕಲ್ಲಿನ ಹೆಲಿಪ್ಯಾಡಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಇದಕ್ಕೂ ಮೊದಲು ಅವರು ಶ್ರೀಮಠದ ಹೊರಆವರಣದ ಶ್ರೀ ವಿದ್ಯಾಶಂಕರ ದೇಗುಲ, ಶ್ರೀ ಶಂಕರಾಚಾರ್ಯ, ಶ್ರೀ ಸುಬ್ರಮಣ್ಯ ದೇವಸ್ಥಾನ, ಶ್ರೀಮಠದ ಒಳ ಆವರಣದ ಶ್ರೀ ಶಕ್ತಿ ಗಣಪತಿ, ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next