Advertisement

ರಫೇಲ್‌ ವ್ಯವಹಾರ ಪಾರದರ್ಶಕ: ಜೋಶಿ

06:40 AM Sep 25, 2018 | Team Udayavani |

ಹುಬ್ಬಳ್ಳಿ: ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಕಾಂಗ್ರೆಸ್‌ ನಾಯಕರು ದಿನಕ್ಕೊಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಫೆಲ್‌ ಯುದ್ಧ ವಿಮಾನ ಖರೀದಿ ವ್ಯವಹಾರ ಪಾರದರ್ಶಕವಾಗಿದೆ. ಆದರೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ. ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ದ್ವಂದ್ವ ಹೇಳಿಕೆ ನೀಡಿದ್ದಾರೆ. ರಿಲಯನ್ಸ್‌ ಸಂಸ್ಥೆ ಬಿಟ್ಟು ಬೇರೆ ಆಯ್ಕೆ ಇರಲಿಲ್ಲ ಎಂದು ಒಮ್ಮೆ ಹೇಳಿದ್ದರೆ, ಇನ್ನೊಮ್ಮೆ ಕಂಪನಿಯ ಒತ್ತಡದ ಬಗ್ಗೆ ನನಗೆ ಗೊತ್ತಿಲ್ಲ, ಕಂಪನಿಯವರನ್ನೇ ಕೇಳಿ ಎನ್ನುತ್ತಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಹೊಲಾಂಡೆ  ಇಬ್ಬರ ಹೇಳಿಕೆಗಳಲ್ಲೂ ಸಾಮ್ಯತೆಯಿದೆ. ಹೊಲಾಂಡೆ ಹೇಳಿಕೆ ಬಗ್ಗೆ ರಾಹುಲ್‌ಗೆ ಮೊದಲೇ ಗೊತ್ತಿತ್ತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದರು.

ಹೆಸರು ಕಾಳು ಖರೀದಿ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವುದಿದ್ದರೆ ರಾಜ್ಯ ಸರ್ಕಾರ ಕೂಡ ಅನುದಾನ ನೀಡಲಿ. ಕೇಂದ್ರ ಸರ್ಕಾರ ಪ್ರತಿ ರೈತರಿಂದ 10 ಕ್ವಿಂಟಲ್‌ ಹೆಸರು ಖರೀದಿ ಮಾಡುತ್ತಿದೆ. ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ. ಕೃಷಿ ಸಚಿವ ಶಿವಶಂಕರ ರೆಡ್ಡಿ ಕೇಂದ್ರದ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next