ಹೊಸದಿಲ್ಲಿ : ದೇಶದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ಹಿಂಸೆ, ಕಿರುಕುಳದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟರ್‌ನಲ್ಲಿ ವಾಗ್ಧಾಳಿ ಮುಂದುವರಿಸಿದ್ದಾರೆ.
“2016ರಲ್ಲಿ ದೇಶದಲ್ಲಿ 19,675 ರೇಪ್ ಕೇಸುಗಳು ವರದಿಯಾಗಿವೆ. ಪ್ರಧಾನಿ ಮೋದಿ ಅವರು ಈ ಕೇಸುಗಳು ಅತ್ಯಂತ ತ್ವರತಗತಿಯಲ್ಲಿ ಇತ್ಯರ್ಥವಾಗಿ ಅಪರಾಧಿಗಳಿಗೆ ಕಠಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
“2016ರಲ್ಲಿ 19,675 ರೇಪ್ ಕೇಸುಗಳು ವರದಿಯಾಗಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪ್ರಧಾನಿ ಮೋದಿ ಅವರು ರೇಪ್ ಕೇಸುಗಳ ತ್ವರಿತ ಇತ್ಯರ್ಥ ಹಾಗೂ ಅಪರಾಧಿಗಳಿಗೆ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಮತ್ತು ಆ ಮೂಲಕ ದೇಶದ ಹೆಣ್ಣು ಮಕ್ಕಳಿಗೆ ನ್ಯಾಯದೊರಕಿಸುವಂತೆ ನೋಡಿಕೊಳ್ಳಬೇಕು’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಕಳೆದ ವಾರವಷ್ಟೇ ರಾಹುಲ್ ಗಾಂಧಿ ಇದೇ ರೀತಿಯ ಟ್ಟಿàಟ್ ಮಾಡಿ, ದೇಶದಲ್ಲಿ ಅತ್ಯಾಚಾರಿಗಳನ್ನು ಮತ್ತು ಕೊಲೆಗಡುಕರನ್ನು ಸರಕಾರಗಳು ಏಕೆ ರಕ್ಷಿಸುತ್ತಿವೆ’ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದರು.
ಜಮ್ಮು ಕಾಶ್ಮೀರದ ಕಥುವಾ ಮತ್ತು ಉತ್ತರ ಪ್ರದೇಶದ ಉನ್ನಾವೋ ರೇಪ್ ಪ್ರಕರಣಗಳ ಹಿನ್ನೆಲೆಯಲ್ಲಿ ರಾಹುಲ್ ಈ ಟ್ವೀಟ್ ಮಾಡಿದ್ದರು.