Advertisement

ಮಾವನಿಂದ ಅತ್ಯಾಚಾರ: ಬಾಲಕಿ ಗರ್ಭಿಣಿ

03:45 AM Jul 03, 2017 | Team Udayavani |

ಕೊರಟಗೆರೆ: ಸ್ವಂತ ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿಯೊಬ್ಬಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ತಾಲೂಕಿನ ಗಂಟಿಗಾನಹಳ್ಳಿ ಗ್ರಾಮದ ನಾರಾಯಣಪ್ಪನ ಪುತ್ರ ಮಹೇಂದ್ರ ಬಾಬು(24) ಅತ್ಯಾಚಾರವೆಸಗಿದವ. ಕೊರಟಗೆರೆ ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿದ್ದ ಬಾಲಕಿ ಹದಿನೈದು ದಿನಕ್ಕೊಮ್ಮೆ ಗಂಟಿಗಾನ ಹಳ್ಳಿಯ ಅಜ್ಜಿಯ ಮನೆಗೆ ತೆರಳುತ್ತಿದ್ದಳು ಎನ್ನಲಾಗಿದೆ.

ಅಜ್ಜಿ ಮನೆಗೆ ತೆರಳಿದ್ದ ವೇಳೆ, 8 ತಿಂಗಳ ಹಿಂದೆ ಗಂಟಿಗಾನಹಳ್ಳಿ ಗ್ರಾಮದ ಹೊರವಲಯದ ಕಣಾÌ ಗಾರ್ಮೆಂಟ್ಸ್‌
ಸಮೀಪವಿರುವ ಜಮೀನಿನ ಮನೆಯಲ್ಲಿ ಮಹೇಂದ್ರಬಾಬು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಕೆಲ ದಿನಗಳಿಂದ ಬಾಲಕಿ ತನ್ನ ಪಾಲಕರಿಗೆ ಹೊಟ್ಟೆ ನೋವಿನ ವಿಷಯ ತಿಳಿಸಿದ್ದಾಳೆ. ಪಾಲಕರು ಮಗಳಿಗೆ ಚಿಕಿತ್ಸೆ ಕೊಡಿಸಲು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಕರೆತಂದ ವೇಳೆ ಬಾಲಕಿ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next