Advertisement

ಅಪ್ರಾಪ್ತೆ ಮೇಲೆ ಅತ್ಯಾಚಾರ: ಪೇದೆಗೆ 10 ವರ್ಷ ಕಠಿಣ ಸಜೆ

06:15 AM Jan 15, 2019 | Harsha Rao |

ರಾಮನಗರ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರವೆಸಗಿ ಪರಾರಿ ಯಾಗಿದ್ದ ಪೊಲೀಸ್‌ ಪೇದೆಗೆ ಇಲ್ಲಿನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ, 1 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಜಿಲ್ಲೆಯ ಚನ್ನಪಟ್ಟಣ ಪೂರ್ವ ಠಾಣೆಯ ಪೇದೆ ವಿಜಯ ಪುರ ಜಿಲ್ಲೆಯ ಶಶಿಕಾಂತ್‌ ಕಟ್ಟಿಮನಿ ಆರೋಪಿ. ಚನ್ನಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ 2016ನೇ ಸಾಲಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಬಾಲಕಿಯೊಬ್ಬಳ ಹಿಂದೆ ಬಿದ್ದ ಈ ಪೊಲೀಸಪ್ಪ ಪ್ರೀತಿ ಮಾಡುವುದಾಗಿ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಬಲಾತ್ಕಾರದಿಂದ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಕಾಲ ದೂಡಿದ್ದು, ಏಕಾಏಕಿ ವಿಜಯಪುರಕ್ಕೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾನೆ ಎಂದು ಬಾಲಕಿ ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನನ್ವಯ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next