Advertisement

ಅತ್ಯಾಚಾರಿ ಬಾಬಾಗೆ 20 ವರ್ಷ ಸಾಲಲ್ಲ, ಜೀವಾವಧಿ ಶಿಕ್ಷೆ ಕೊಡಿ…

04:02 PM Oct 04, 2017 | Team Udayavani |

ನವದೆಹಲಿ: ಇತ್ತೀಚೆಗೆ ಅತ್ಯಾಚಾರ ಆರೋಪದ ಪ್ರಕರಣದಲ್ಲಿ 20 ವರ್ಷ ಜೈಲುಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ರಾಮ್ ರಹೀಮ್ ಗುರ್ಮೀತ್ ಸಿಂಗ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆಂದು ಕೋರಿ ಸಂತ್ರಸ್ತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Advertisement

2 ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಕುಲಾದ ವಿಶೇಷ ಸಿಬಿಐ ಕೋರ್ಟ್ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ರಾಮ್ ರಹೀಂಗೆ 20 ವರ್ಷ ಜೈಲುಶಿಕ್ಷೆ ವಿಧಿಸಿದೆ. ಆದರೆ ರಾಮ್ ರಹೀಮ್ ಗೆ ನೀಡಿರುವ ಶಿಕ್ಷೆಯ ತೀರ್ಪನ್ನು ಮರುಪರಿಶೀಲಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತೆ ಅತ್ಯಾಚಾರಕ್ಕೊಳದ ಸಂತ್ರಸ್ತೆ ಕೋರ್ಟ್ ಗೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ಧಾರ್ಮಿಕ ಸಂಸ್ಥೆಯ ಉನ್ನತ ಸ್ಥಾನದಲ್ಲಿದ್ದ ಡೇರಾ ಸಚ್ಚಾದ ಮುಖ್ಯಸ್ಥ ರಾಮ್ ರಹೀಂ ವಿಶ್ವಾಸದ್ರೋಹ ಎಸಗಿರುವುದನ್ನು ವಿಚಾರಣಾಧೀನ ಕೋರ್ಟ್ ಪರಾಮರ್ಶಿಸಿದೆ. ಹಾಗಾಗಿ ರಾಮ್ ರಹೀಂಗೆ ಗರಿಷ್ಠ ಶಿಕ್ಷೆಯನ್ನೇ ವಿಧಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next