ಚಂಡೀಗಢ: ಮೇಲಿಂದ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವ ಹರ್ಯಾಣದಲ್ಲಿ ಮತ್ತೆರಡು ಇಂಥದ್ದೇ ಪ್ರಕರಣಗಳು ನಡೆದಿವೆ. 10 ವರ್ಷ ವಯಸ್ಸಿನ ಬಾಲಕಿಯ ಮೇಲೆ 50 ವರ್ಷ ವಯಸ್ಸಿನ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಸೋಮವಾರ ಇಲ್ಲಿಯ ಪಿಂಜೋರ್ ಎಂಬಲ್ಲಿ ನಡೆದಿದೆ. ವ್ಯಕ್ತಿಯು ಬಾಲಕಿಯ ಗುಪ್ತಾಂಗಕ್ಕೆ ಮರದ ತುಂಡುಗಳನ್ನು ತುರುಕಿ ಗುಪ್ತಾಂಗ ಊನಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಮನೆಯಿಂದ ಹೊರಗಡೆ ಆಟವಾಡುತ್ತಿದ್ದ ವೇಳೆ ಈ ಕೃತ್ಯ ನಡೆಸಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ, ಹರ್ಯಾಣದ ಫರೀದಾಬಾದ್‌ನಲ್ಲಿ 23 ವರ್ಷ ವಯಸ್ಸಿನ ಮಹಿಳೆಯನ್ನು ಅಪಹರಿಸಿ ಗುಂಪೊಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ.