Advertisement

ಕೇರಳದ ಕಾಂಗ್ರೆಸ್‌ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌

06:50 AM Jul 22, 2017 | Team Udayavani |

ತಿರುವನಂತಪುರ: ಕೇರಳದ ಕಾಂಗ್ರೆಸ್‌ ಶಾಸಕ ವಿನ್ಸೆಂಟ್‌ ವಿರುದ್ಧ ಅತ್ಯಾಚಾರ ಮೊಕದ್ದಮೆ ದಾಖಲಿಸಲಾಗಿದೆ. 51 ವಯಸ್ಸಿನ ಮಹಿಳೆಯೊಬ್ಬರು ವಿನ್ಸೆಂಟ್‌ರಿಂದ ದೌರ್ಜನ್ಯಕ್ಕೀ ಡಾಗಿದ್ದಾಗಿ ನೀಡಿರುವ ಹೇಳಿಕೆ ಆಧಾರದಲ್ಲಿ ಕೇಸು ಹಾಕಲಾ ಗಿದೆ. ಜತೆಗೆ, ಆಕೆ ದೌರ್ಜನ್ಯ ಕ್ಕೀಡಾದ ಬಳಿಕ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

Advertisement

ಮಹಿಳೆಯ ಪತಿ ಬುಧವಾರ ಈ ಕುರಿತು ದೂರು ನೀಡಿದ್ದರು. ನನ್ನ ಪತ್ನಿಗೆ ವಿನ್ಸೆಂಟ್‌ ಮೇಲಿಂದ ಮೇಲೆ ಫೋನ್‌ ಕರೆ ಮಾಡುತ್ತಿದ್ದರು ಎಂದು ಆರೋಪಿಸಿ ದ್ದರು. ವಿನ್ಸೆಂಟ್‌ ವಿರುದ್ಧ ಪೊಲೀಸರು ಅತ್ಯಾಚಾರ, ಹಿಂಬಾಲಿಸುವಿಕೆ, ಆತ್ಮಹತ್ಯೆಗೆ ಪ್ರಚೋದನೆ ಮೊಕದ್ದಮೆ ಗಳನ್ನು ಹಾಕಿದ್ದಾರೆ. ಆದರೆ  ಆರೋಪಗಳನ್ನು ಅಲ್ಲ ಗಳೆ ದಿರುವ ವಿನ್ಸೆಂಟ್‌, ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next