ಉಳ್ಳಾಲ: ದೇರಳಕಟ್ಟೆಯಲ್ಲಿ ವಾಸವಾಗಿರುವ ನೇಪಾಲ ಮೂಲದ ಬಾಲಕಿಯನ್ನು ನಿರಂತರ ಅತ್ಯಾಚಾರ ನಡೆಸಿದ ಪ್ರಕರಣ ಸಂಬಂಧಿಸಿದಂತೆ ನೇಪಾಲ ಮೂಲದ ಯುವಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಕುಮ್ಮ ಸಿಂಗ್ (22) ಬಂಧಿತ. ಆತ ತೊಕ್ಕೊಟ್ಟಿನಲ್ಲಿ ಫಾಸ್ಟ್ಫುಡ್ ಕೆಲಸ ಮಾಡುತ್ತಿದ್ದು. ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಕುಮ್ಮ ಸಿಂಗ್ ಸಹಿತ ನೇಪಾಲ ಮೂಲದ ಮೂರು ನಾಲ್ಕು ಕುಟುಂಬ ಹೊಟೇಲ್ಗಳಲ್ಲಿ ಫಾಸ್ಟ್ಫುಡ್ ಮಾಡುವ ಕೆಲಸಕ್ಕೆಂದು ಆಗಮಿಸಿ ದೇರಳಕಟ್ಟೆಯ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ.
14 ವರ್ಷದ ಬಾಲಕಿಯೂ ಅದೇ ಮನೆಯಲ್ಲಿ ತಂದೆ ಮತ್ತು ತಾಯಿಯೊಂದಿಗೆ ವಾಸವಾಗಿದ್ದು, ಕುಮ್ಮ ಸಿಂಗ್ ಮತ್ತು ಆತನ ಸಹೋದರ ಅದೇ ಮನೆಯಲ್ಲಿ ವಾಸವಾಗಿದ್ದರು. ಆರು ತಿಂಗಳಿನಿಂದ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿಯನ್ನು ಹೆದರಿಸಿ ಅತ್ಯಾಚಾರ ನಡೆಸುತ್ತಿದ್ದ ಕುಮ್ಮ ಸಿಂಗ್ ಬಾಲಕಿ ಬಸುರಿಯಾಗುತ್ತಿದಂತೆ ಪರಾರಿಯಾಗಿದ್ದ. ವಿಷಯ ತಿಳಿದ ಬಾಲಕಿಯ ಹೆತ್ತವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೊಣಾಜೆ ಪ್ರಭಾರ ಇನ್ಸ್ಪೆಕ್ಟರ್ ಕೆ.ಎಂ. ಶರೀಫ್ ಅವರ ಮಾರ್ಗದರ್ಶನದಲ್ಲಿ ಎಸ್ಐ ಸುಕುಮಾರ್ ಮತ್ತು ಸಿಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.