Advertisement
ದೊಡ್ಡ ಮಳೂರಿನ ಅಂಬೆಗಾಲು ನವನೀತ ಕೃಷ್ಣನ ಕುರಿತಾಗಿ ಪುರಂದರದಾಸರಿಂದ ರಚಿತಗೊಂಡ “ಜಗದೋದ್ಧಾರನ’ ಹಾಡಿನ ಪ್ರಸ್ತುತಿ ಮಾಧುರ್ಯಪೂರ್ಣವಾಗಿತ್ತು. ಊತುಕ್ಕಾಡು ವೆಂಕಟ ಸುಬ್ಬಯ್ಯರ್ ವಿರಚಿತ “ಅಲೈಪಾಯುದೇ ಕಣ್ಣಾ’ ಹಾಗೂ ಭದ್ರಾಚಲ ರಾಮದಾಸ ವಿರಚಿತ “ಪಲುಕೆ ಬಂಗಾರಮಾಯೇನ’ ಪ್ರಸ್ತುತಿಯಲ್ಲಿ ಭಕ್ತಿ ಭಾವಗಳು ಸಮ್ಮಿಳಿತವಾಗಿದ್ದವು. ಕೃಷ್ಣಾವತಾರದ ಕೆಲವು ಲೀಲೆಗಳನ್ನು ನವರತ್ನಗಳಿಗೆ ಹೋಲಿಸಿದ ವರ್ಣನೆಯಿರುವ ಅಣ್ಣಮಾಚಾರ್ಯರ ರಚನೆಯ ಪ್ರಸ್ತುತಿ ಮನೋಜ್ಞವಾಗಿತ್ತು. ವಾದಿರಾಜ ತೀರ್ಥ ವಿರಚಿತ ಹಾಡಿನೊಂದಿಗೆ ಸಂಪನ್ನಗೊಂಡ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರೀಕಾಂತ್ ನಾಯಕ್ (ತಬಲಾ),ಧೀರಜ್ ರಾವ್ (ಕೀಬೋರ್ಡ್) ಹಾಗೂ ಉದಯ ಕುಮಾರ್ (ರಿದಮ್ ಪ್ಯಾಡ್) ಸಹಕರಿಸಿದರು.
Advertisement
ರಾವ್ ಸಹೋದರಿಯರ ಸಂಗೀತ ಕಛೇರಿ
05:29 PM Apr 11, 2019 | mahesh |
Advertisement
Udayavani is now on Telegram. Click here to join our channel and stay updated with the latest news.