ದುಬೈ: ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವರಾಗಿರುವ ಅನುರಾಗ್ ಠಾಕೂರ್ ಹಾಗೂ ಬಾಲಿವುಡ್‌ನ ಪ್ರಸಿದ್ಧ ಹೀರೋ ರಣವೀರ್ ಸಿಂಗ್ ದುಬೈನಲ್ಲಿ ನಡೆಯುತ್ತಿರುವ “ದುಬೈ ಎಕ್ಸ್‌ಪೊ 2020’ನಲ್ಲಿ ಸೋಮವಾರ ಭಾಗವಹಿಸಿದ್ದರು.
ಅಲ್ಲಿ ಭಾರತದ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರವು ಜಾಗತಿಕವಾಗಿ ಹೇಗೆ ತಲುಪುತ್ತಿದೆ ಎನ್ನುವ ವಿಚಾರವಾಗಿ ಅವರು ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:ಧರ್ಮಾಪುರದಲ್ಲಿ ಮಾರಮ್ಮದೇವರ ಉತ್ಸವ : ತಂಬಿಟ್ಟು ಆರತಿ ಹೊತ್ತು ಸಾಗಿಬಂದ ಹೆಂಗಳೆಯರು
ಇದೇ ವೇಳೆ ರಣವೀರ್ ನಟನೆಯ “ಬಾಜಿರಾವೋ ಮಸ್ತಾನಿ’ ಸಿನಿಮಾದ “ತನ್ಹಾಯಿ’ ಹಾಡನ್ನು ಹಾಕಲಾಗಿದ್ದು, ಅದಕ್ಕೆ ರಣವೀರ್ ಹೆಜ್ಜೆ ಹಾಕಿದ್ದಾರೆ. ಅವರು ಸಚಿವರನ್ನೂ ತಮ್ಮೊಂದಿಗೆ ನೃತ್ಯ ಮಾಡಲು ಕರೆದಿದ್ದು, ಸಚಿವರೂ ನೃತ್ಯದಲ್ಲಿ ಭಾಗಿಯಾಗಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.