ನವದೆಹಲಿ:ಬಾಲಿವುಡ್ ನಟ ರಣ್ ವೀರ್ ಸಿಂಗ್ ಮಾಜಿ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್, ಸರ್.ವಿವಿಯನ್ ರಿಚರ್ಡ್ಸ್ ಮತ್ತು ವಾಸಿಂ ಅಕ್ರಮ್ ಸಹಿಯುಳ್ಳ ಬ್ಯಾಟ್ ಅನ್ನು 2000 ಪೌಂಡ್ ಹಣಕ್ಕೆ ಖರೀದಿಸಿದ್ದಾರೆ.
ಕಬೀರ್ ಖಾನ್ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಜೀವನಾಧಾರಿತ ಸಿನಿಮಾ “83” ನಿರ್ದೇಶಿಸುತ್ತಿದ್ದು, ಈ ಸಿನಿಮಾದಲ್ಲಿ ರಣ್ ವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಈ ಸಿನಿಮಾಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಕ್ರಿಕೆಟಿಗರ ಜೊತೆ ತೆಗೆಯಿಸಿಕೊಂಡ ಫೋಟೊವನ್ನು ಸಿಂಗ್ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು.
ಇದೀಗ ಖ್ಯಾತ ಮಾಜಿ ಕ್ರಿಕೆಟಿಗರ ಸಹಿಯುಳ್ಳ ಬ್ಯಾಟ್ ಅನ್ನು ಖರೀದಿಸಿದ್ದಾರೆ. ಅಂದಾಜು ಒಂದು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿ ವ್ಯಯಿಸಿ ಸಿಂಗ್ ಬ್ಯಾಟ್ ಖರೀದಿಸಿದ್ದಾರೆ. ಹರಾಜಿನಲ್ಲಿ ರಣ್ ಬೀರ್ ಸಿಂಗ್ ಆಟೋಗ್ರಾಫ್ ಹಾಕಿದ್ದ ಬ್ಯಾಟ್ ಅನ್ನು ಅತೀ ಹೆಚ್ಚು ಹಣಕ್ಕೆ ಬಿಡ್ ಮಾಡಿ ಖರೀದಿಸಿರುವುದಾಗಿ ವರದಿ ತಿಳಿಸಿದೆ.