Advertisement

ಮುಂಬಯಿಗೆ ಆಗಮಿಸಿದ ದೀಪ್‌ವೀರ್‌ ದಂಪತಿ ; ನವಜೋಡಿಯ ವಿಡಿಯೋ ನೋಡಿ

03:11 PM Nov 18, 2018 | Team Udayavani |

 ಮುಂಬಯಿ: ಇಟಲಿಯಲ್ಲಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಜೋಡಿ  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಭಾನುವಾರ ಮುಂಬಯಿಯಲ್ಲಿ ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದಾರೆ.

Advertisement

ರಣ್‌ವೀರ್‌ ಸಿಂಗ್‌ ನಿವಾಸದಲ್ಲಿರುವ ನವ ಜೋಡಿ  ಮನೆಯಿಂದ ಹೊರ ಬಂದು ಮಾಧ್ಯಮದವರತ್ತ ನಗುನಗುತ್ತಾ ಕೈ ಬೀಸಿದ್ದಾರೆ. 

ಇಟಲಿಯ ಲೇಕ್ ಕೋಮೊದಲ್ಲಿ ಬುಧವಾರ ಸಾರಸ್ವತ ಕೊಂಕಣಿ ಸಂಪ್ರದಾಯದಂತೆ,ಗುರುವಾರ ಸಿಂಧಿ ಸಂಪ್ರದಾಯದ ಪ್ರಕಾರ   ಇಬ್ಬರ ಕುಟುಂಬದ ಸದಸ್ಯರು ಮತ್ತು ಆಯ್ದ ನಿಕಟ ಗೆಳೆಯರ ಸಮ್ಮಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

Advertisement

ಆರತಕ್ಷತೆ ನವೆಂಬರ್ 21ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಬೆಂಗಳೂರಿನಲ್ಲಿ ಹಾಗೂ ನವೆಂಬರ್ 28ರಂದು ಮುಂಬೈನಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next