Advertisement
ಬುಧವಾರ ಸಾಮಾನ್ಯ ಆಟವಾಡಿ 229 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ, ಗುರುವಾರ 407 ರನ್‌ಗಳಿಗೆ ಆಲೌಟಾಗಿದೆ. ನಾಯಕ ಮಾಯಾಂಕ್ ಅಗರ್ವಾಲ್ ಅದ್ಭುತ ಆಟವಾಡಿ 249 ರನ್ ಗಳಿಸಿದ್ದಾರೆ. ಮಾತ್ರವಲ್ಲ ಭಾರತ ಟೆಸ್ಟ್ ತಂಡಕ್ಕೆ ಮರಳುವ ಬಲವಾದ ಸುಳಿವು ನೀಡಿದ್ದಾರೆ.
Related Articles
Advertisement
ಸೌರಾಷ್ಟ್ರ 76ಕ್ಕೆ2: ಕರ್ನಾಟಕದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ತನ್ನ 1ನೇ ಇನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ 2 ವಿಕೆಟ್‌ಗಳ ನಷ್ಟಕ್ಕೆ 76 ರನ್ ಗಳಿಸಿದೆ. ಅದೂ ಕೂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಸದ್ಯ ತಲಾ 27 ರನ್ ಗಳಿಸಿರುವ ಹಾರ್ವಿಕ್ ದೇಸಾಯಿ, ಶೆಲ್ಡನ್ ಜಾಕ್ಸನ್ ಕ್ರೀಸ್‌ನಲ್ಲಿದ್ದಾರೆ. ಸ್ನೆಲ್ ಪಟೇಲ್, ವಿಶ್ವರಾಜ್ ಜಡೇಜ ಬೇಗನೆ ಔಟಾಗಿದ್ದಾರೆ. ಸದ್ಯ ಕ್ರೀಸ್‌ನಲ್ಲಿರುವ ಜಾಕ್ಸನ್-ದೇಸಾಯಿ ಮೇಲೆ ಸೌರಾಷ್ಟ್ರ ಭವಿಷ್ಯವಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 1ನೇ ಇನಿಂಗ್ಸ್ 407 ಆಲೌಟ್ (ಮಾಯಾಂಕ್ ಅಗರ್ವಾಲ್ 249, ಎಸ್.ಶರತ್ 66, ಚೇತನ್ ಸಕಾರಿಯ 73ಕ್ಕೆ 3, ಕುಶಾಂಗ್ ಪಟೇಲ್ 109ಕ್ಕೆ 3). ಸೌರಾಷ್ಟ್ರ 1ನೇ ಇನಿಂಗ್ಸ್ 76/2.
ಬಂಗಾಳ-ಮ.ಪ್ರ.: ಇನಿಂಗ್ಸ್ ಮುನ್ನಡೆಗೆ ಪೈಪೋಟಿ :
ಇಂದೋರ್: ಹಾಲಿ ಚಾಂಪಿಯನ್ ಮಧ್ಯಪ್ರದೇಶ ಮತ್ತು ಬಂಗಾಳ ನಡುವಿನ ಮತ್ತೂಂದು ಸೆಮಿಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಗಾಗಿ ಪೈಪೋಟಿ ಎದುರಾಗುವ ಸಾಧ್ಯತೆ ಕಂಡುಬಂದಿದೆ. 4ಕ್ಕೆ 307 ರನ್ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿದ ಬಂಗಾಳ 438ಕ್ಕೆ ಆಲೌಟ್ ಆಯಿತು. ಜವಾಬಿತ್ತ ಎಂಪಿ 2 ವಿಕೆಟಿಗೆ 56 ರನ್ ಗಳಿಸಿದೆ.
ಒಟ್ಟಾರೆಯಾಗಿ ದ್ವಿತೀಯ ದಿದನಾಟದಲ್ಲಿ ಮಧ್ಯಪ್ರದೇಶವೇ ಮೇಲುಗೈ ಸಾಧಿಸಿತು ಎನ್ನಲಡ್ಡಿಯಿಲ್ಲ. ಅದು ಬಂಗಾಳದ ಉಳಿದ 6 ವಿಕೆಟ್‌ಗಳನ್ನು ಕೇವಲ 131 ರನ್ ಅಂತರದಲ್ಲಿ ಉರುಳಿಸಿತು. ಕೀಪರ್ ಅಭಿಷೇಕ್ ಪೊರೆಲ್ (51) ಮತ್ತು ನಾಯಕ ಮನೋಜ್ ತಿವಾರಿ (42) 6ನೇ ವಿಕೆಟಿಗೆ 78 ರನ್ ಪೇರಿಸಿ ಬಂಗಾಳದ ಮೊತ್ತವನ್ನು 400ರ ಗಡಿ ದಾಟಿಸಿದರು. ಎಂಪಿ ಪರ ಕುಮಾರ ಕಾರ್ತಿಕೇಯ 3, ಗೌರವ್ ಯಾದವ್ ಮತ್ತು ಅನುಭವ್ ಅಗರ್ವಾಲ್ ತಲಾ 2 ವಿಕೆಟ್ ಕಿತ್ತರು. ಮಧ್ಯಪ್ರದೇಶ ಈಗಾಗಲೇ ಆರಂಭಿಕರಿಬ್ಬರನ್ನೂ ಕಳೆದುಕೊಂಡಿದೆ. ಯಶ್ ದುಬೆ (12) ಮತ್ತು ಹಿಮಾಂಶು ಮಂತ್ರಿ (23) ಪೆವಿಲಿಯನ್ ಸೇರಿದ್ದಾರೆ.