ಕೋಲ್ಕತಾ: ವಿದರ್ಭ ತಂಡದೆದುರಿನ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಕೇವಲ 5 ರನ್‌ಗಳ ವಿರೋಚಿತ ಸೋಲು ಅನುಭವಿಸಿದೆ.
ಕೊನೆ ದಿನದ ಆಟ ದಲ್ಲಿ ಪಂದ್ಯ ಉಳಿಸಿಕೊಳ್ಳಲು ಕಠಿಣ ಹೋರಾಟ ನಡೆಸಿತಾದರೂ 5 ರನ್‌ಗಳ ಅಂತರದಿಂದ ಸೋಲು ಅನುಭವಿಸಲೇ ಬೇಕಾಯಿತು.
ಕರ್ನಾಟಕ ಆಟಗಾರರು ಬಾಲದಲ್ಲಿ ಬಲವಿದೆ ಎನ್ನುವುದನ್ನು ತೋರಿಸಿದರು. ಕೊನೆಯಲ್ಲಿ ಶ್ರೇಯಸ್ ಗೋಪಾಲ್ 24 ರನ್‌ಗಳಿಸಿ ಅಜೇಯರಾಗಿ ಉಳಿದರೆ, ವೇಗಿ ಅಭಿಮನ್ಯು ಮಿಥುನ್ 33 ರನ್‌ಗಳಿಸಿ ಔಟಾದರು. ನಾಯಕ ವಿನಯ್ ಕುಮಾರ್ 36 ರನ್‌ಗಳಿಸಿ ನಿರ್ಗಮಿಸಿದರು.
ಕೈಯಲ್ಲಿ ಇದ್ದ 3 ವಿಕೆಟ್ ಗಳಿಂದ ಗೆಲುವಿಗಾಗಿ 87 ರನ್ ಗಳಿಸಬೇಕಾಗಿತ್ತು. ಆದರೆ 82 ರನ್ ಗಳಿಸುವಷ್ಟರಲ್ಲಿ ಆಲೌಟಾಗುವ ಮೂಲಕ ವಿನಯ್ ಕುಮಾರ್ ಪಡೆ ಭಾರೀ ನಿರಾಸೆ ಅನುಭವಿಸಿದೆ.
ವಿದರ್ಭ ಪರ ರಜನೀಶ್ ಗುರ್ಬಾನಿ ಮೊದಲ ಇನ್ನಿಂಗ್ಸ್‌ನಲ್ಲಿ 5 , ದ್ವಿತೀಯ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಗಮನ ಸೆಳೆದರು.
ಸ್ಕೋರ್ ಪಟ್ಟಿ
ವಿದರ್ಭ 1 ಇನ್ನಿಂಗ್ಸ್ 185 , 2 ನೇ ಇನ್ನಿಂಗ್ಸ್ 313
ಕರ್ನಾಟಕ 1 ಇನ್ನಿಂಗ್ಸ್ 301 ಮತ್ತು 2 ನೇ ಇನ್ನಿಂಗ್ಸ್ 192