Advertisement

ರಣಜಿ ಟ್ರೋಫಿ: ಕಾಶ್ಮೀರ ವಿರುದ್ಧ ಕರುಣ್‌ ಅಜೇಯ ಶತಕ

10:58 PM Feb 24, 2022 | Team Udayavani |

ಚೆನ್ನೈ: ಗುರುವಾರ ಮೊದಲ್ಗೊಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ರಣಜಿ ಪಂದ್ಯದಲ್ಲಿ ತೀವ್ರ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ ಕರ್ನಾಟಕವನ್ನು ಕರುಣ್‌ ನಾಯರ್‌ ಅಜೇಯ ಶತಕದ ಮೂಲಕ ಮೇಲೆತ್ತಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ 8 ವಿಕೆಟಿಗೆ 268 ರನ್‌ ಗಳಿಸಿದೆ. ಇದರಲ್ಲಿ ನಾಯರ್‌ ಕೊಡುಗೆ ಅಜೇಯ 152.

Advertisement

ದೇವದತ್ತ ಪಡಿಕ್ಕಲ್‌ (8) ಔಟಾದೊಡನೆ 3ನೇ ಓವರ್‌ನಲ್ಲೇ ಬ್ಯಾಟ್‌ ಹಿಡಿದು ಬಂದ ನಾಯರ್‌ 267 ಎಸೆತಗಳನ್ನು ನಿಭಾಯಿಸಿ ನಿಂತಿದ್ದಾರೆ. ಆಪತ್ಭಾಂಧವನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿ 21 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿದ್ದಾರೆ. ನಾಯರ್‌ ಅವರದು ಏಕಾಂಗಿ ಹೋರಾಟವಾಗಿತ್ತು. ಆರಂಭಕಾರ ಆರ್‌. ಸಮರ್ಥ್ (45) ಮತ್ತು ಕೊನೆಯಲ್ಲಿ ರೋನಿತ್‌ ಮೋರೆ (23) ಅವರಿಂದ ಮಾತ್ರ ನಾಯರ್‌ಗೆ ಉಪಯುಕ್ತ ಬೆಂಬಲ ಸಿಕ್ಕಿತು. ಸಮರ್ಥ್-ನಾಯರ್‌ ಜೋಡಿಯ ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 98 ರನ್‌ ಒಟ್ಟುಗೂಡಿತು.

ಪರಿಣಾಮಕಾರಿ ಬೌಲಿಂಗ್‌ :

ಕಾಶ್ಮೀರದ ವೇಗಿಗಳಾದ ಉಮ್ರಾನ್‌ , ಮಜ್ತಬಾ ಯೂಸುಫ್ ಮತ್ತು ಆಫ್ಸ್ಪಿನ್ನರ್‌ ಪರ್ವೇಜ್‌ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು. ಮೂವರೂ ತಲಾ 2 ವಿಕೆಟ್‌ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ ಪ್ರಥಮ

Advertisement

ಇನ್ನಿಂಗ್ಸ್ -8 ವಿಕೆಟಿಗೆ 268 (ಕರುಣ್‌ ಬ್ಯಾಟಿಂಗ್‌ 152, ಆರ್‌. ಸಮರ್ಥ್ 45, ರೋನಿತ್‌ ಮೋರೆ 23, ಮಲಿಕ್‌ 35ಕ್ಕೆ 2, ಯೂಸುಫ್ 44ಕ್ಕೆ 2, ರಸೂಲ್‌ 51ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next