Advertisement

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

10:43 PM Jan 28, 2022 | Team Udayavani |

ಹೊಸದಿಲ್ಲಿ: ಈ ವರ್ಷದ ರಣಜಿ ಟ್ರೋಫಿ ಕ್ರಿಕೆಟ್‌ ಕೂಟವನ್ನು ಎರಡು ಹಂತಗಳಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಶುಕ್ರವಾರ ನಡೆದ ಮಂಡಳಿ ಸಭೆ ಬಳಿಕ ಕಾರ್ಯದರ್ಶಿ ಜಯ್‌ ಶಾ ಈ ನಿರ್ಧಾರವನ್ನು ಪ್ರಕಟಿಸಿದರು.
“ಐಪಿಎಲ್‌ಗೂ ಮುನ್ನ ಹಾಗೂ ಐಪಿಎಲ್‌ ಬಳಿಕ..

Advertisement

ಹೀಗೆ ಎರಡು ಹಂತಗಳಲ್ಲಿ ಈ ಬಾರಿಯ ರಣಜಿ ಟ್ರೋಫಿ ಟೂರ್ನಿ ಆಯೋಜನೆಯಾಗಲಿದೆ. ಮೊದಲ ಹಂತದಲ್ಲಿ ಗ್ರೂಪ್‌ ಹಂತದ ಎಲ್ಲ ಪಂದ್ಯಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜೂನ್‌ನಲ್ಲಿ ಎರಡನೇ ಹಂತವನ್ನು ನಡೆಸಲಾಗುವುದು. ಇಲ್ಲಿ ನಾಕೌಟ್‌ ಹಂತದ ಪಂದ್ಯಗಳನ್ನು ಆಯೋಜಿಸಲಾಗುತ್ತದೆ’ ಎಂದು ಜಯ್‌ ಶಾ ಮಾಹಿತಿಯಿತ್ತರು.

ಪ್ರತಿಷ್ಠಿತ ದೇಶಿ ಕ್ರಿಕೆಟ್‌
“ಕೊರೊನಾ ಸೋಂಕಿನ ಅಪಾಯವನ್ನು ಕಡಿಮೆಗೊಳಿ ಸಲು ನಾವು ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸ್ಪರ್ಧಾತ್ಮಕ ರಣಜಿ ಟ್ರೋಫಿ ಕ್ರಿಕೆಟ್‌ ಕೂಟವನ್ನು ನಡೆಸಲು ನಾವು ಬದ್ಧವಾಗಿದ್ದೇವೆ. ಇದು ಪ್ರತಿಷ್ಠಿತ ದೇಶಿ ಕ್ರಿಕೆಟ್‌ ಸ್ಪರ್ಧೆ. ಪ್ರತೀ ವರ್ಷ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ಇದು ನೀಡುತ್ತದೆ. ಈ ಅತ್ಯುನ್ನತ ಕ್ರಿಕೆಟ್‌ ಕೂಟದ ಹಿತಾಸಕ್ತಿಯನ್ನು ಕಾಪಾಡಲು ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ’ ಎಂದು ಜಯ್‌ ಶಾ ತಿಳಿಸಿದರು.

ಇದನ್ನೂ ಓದಿ:ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

Advertisement

ನಿಗದಿಯಂತೆ ರಣಜಿ ಟ್ರೋಫಿ ಜ. 13ರಂದು ಆರಂಭವಾಗಬೇಕಿತ್ತು. ಆದರೆ ದೇಶದಲ್ಲಿ ಒಮಿಕ್ರಾನ್‌ ಮತ್ತು ಕೊರೊನಾ ಸೋಂಕು ಹೆಚ್ಚಳವಾದ ಕಾರಣದಿಂದ ಕೂಟವನ್ನು ಮುಂದೂಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next