ಇಂದೋರ್: ಮುಂಬೈ ನಡುವಿನ ರಣಜಿ ಕ್ರಿಕೆಟ್ ಫೈನಲ್ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸಿದ ಪಾರ್ಥಿವ್ ಪಟೇಲ್ ನಾಯಕತ್ವದ ಗುಜರಾತ್ ತಂಡ ಚೊಚ್ಚಲ ಬಾರಿಗೆ ರಣಜಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾದಿಸಿದ್ದ ಗುಜರಾತ್ ಎದುರಾಳಿ ಮುಂಬೈ ತಂಡಕ್ಕೆ ಪ್ರಬಲ ಪೈಪೋಟಿ ನೀಡಿ ಭರ್ಜರಿ ಗೆಲುವು ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 228 ರನ್ ಮಾತ್ರ ಗಳಿಸಿದ್ದ ಮುಂಬಯಿ 2ನೇ ಇನಿಂಗ್ಸ್‌ನಲ್ಲಿ 411 ರನ್ ಗಳಿಸಿ ಆಲೌಟಾಗಿತ್ತು. ಪ್ರಶಸ್ತಿ ಗೆಲ್ಲಲು 312 ರನ್ ಗಳಿಸುವ ಕಠಿಣ ಗುರಿ ಪಡೆದ ಗುಜರಾತ್ 5 ವಿಕೆಟ್ ಉಳಿಸಿಕೊಂಡು ಗುರಿ ತಲುಪಿ ಸಂಭ್ರಮಿಸಿತು.
ಮಂದ ಬೆಳಕಿನಿಂದಾಗಿ ನಾಲ್ಕನೇ ದಿನದಾಟ ಬೇಗ ಅಂತ್ಯಗೊಂಡಾಗ ಗುಜರಾತ್ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 47 ರನ್ ಗಳಿಸಿತ್ತು. ಶನಿವಾರ ಭರ್ಜರಿ ಆಟವಾಡಿದ ಬ್ಯಾಟ್ಸ್‌ಮನ್‌ಗಳು ಗೆಲುವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಕೊಡುಗೆ ಸಲ್ಲಿಸಿದ್ದ ಪಾರ್ಥಿವ್ ಪಟೇಲ್ 2 ನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.143 ರನ್‌ಗಳಿಸಿ ಔಟಾದರು.
ಸ್ಕೋರ್
ಮುಂಬೈ 1ನೇ ಇನಿಂಗ್ಸ್ 228/10
ಮತ್ತು 2ನೇ ಇನಿಂಗ್ಸ್ 411/10
ಗುಜರಾತ್ 1ನೇ ಇನಿಂಗ್ಸ್ 328
ಮತ್ತು 2ನೇ ಇನಿಂಗ್ಸ್ 313/5