Advertisement
ಆರಂಭದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅಮೋಘ ಗೆಲುವ ಸಾಧಿಸಿದ್ದ ಕರ್ನಾಟಕ ತಂಡವು ಅಹ್ಮದಾಬಾದ್‌ದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಹೀನಾಯವಾಗಿ ಆಡಿ ಸೋಲನ್ನು ಕಂಡಿತ್ತು. ಗೆಲ್ಲಲು ಕೇವಲ 110 ರನ್ ಗಳಿಸುವ ಗುರಿ ಪಡೆದಿದ್ದ ಕರ್ನಾಟಕ ತಂಡ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 50 ರನ್ ಗಳಿಸಿದ್ದರೂ ಆಬಳಿಕ ನಾಟಕೀಯವಾಗಿ ಬ್ಯಾಟಿಂಗ್ ಕುಸಿತ ಕಂಡು 103 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತ್ತು.
“ಬಿ’ ಬಣದಲ್ಲಿರುವ ಮುಂಬಯಿ ತಂಡವು ತಿರುವನಂತಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ತಂಡದ ಸವಾಲನ್ನು ಎದುರಿಸಲಿದೆ. ಮುಂಬಯಿ ಈ ಹಿಂದಿನ ಎರಡು ಪಂದ್ಯಗಳಲ್ಲಿ ಬಿಹಾರ ಮತ್ತು ಆಂಧ್ರ ತಂಡವನ್ನು ಸೋಲಿಸಿದ ಸಾಧನೆ ಮಾಡಿದೆ. ಬಿಹಾರ ವಿರುದ್ದ ಇನ್ನಿಂಗ್ಸ್ ಗೆಲುವು ಸಾಧಿಸಿದ್ದ ಮುಂಬಯಿ ತಂಡವು ಆಂಧ್ರ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಇದೇ ವೇಳೆ ಕೇರಳ ತಂಡವು ಉತ್ತರ ಪ್ರದೇಶ ಮತ್ತು ಅಸ್ಸಾಂ ವಿರುದ್ಧ ಆಡಿದ್ದು ಈ ಎರಡೂ ತಂಡಗಳು ಡ್ರಾ ಆಗಿದ್ದವು.