Advertisement

ರಣಜಿ ಟ್ರೋಫಿ: ಡೆಲ್ಲಿ ಗೆಲುವಿಗೆ 217 ರನ್‌ ಗುರಿ

06:20 AM Dec 11, 2017 | Team Udayavani |

ವಿಜಯವಾಡ: ಮಧ್ಯ ಪ್ರದೇಶ ತಂಡದೆದುರು ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ದಿಲ್ಲಿ ತಂಡ ಜಯಭೇರಿ ಬಾರಿಸಲು 217 ರನ್‌ ಗಳಿಸುವ ಗುರಿ ಪಡೆದಿದೆ.

Advertisement

ಮೊದಲ ಇನ್ನಿಂಗ್ಸ್‌ನಲ್ಲಿ 67 ರನ್‌ ಮುನ್ನಡೆ ಪಡೆದಿದ್ದ ದಿಲ್ಲಿ ತಂಡವೀಗ ಸ್ಪಷ್ಟ ಗೆಲುವಿನ ನಿರೀಕ್ಷೆಯಲ್ಲಿದೆ. 217 ರನ್‌ ಗಳಿಸುವ ಗುರಿ ಪಡೆದ ದಿಲ್ಲಿ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 8 ರನ್‌ ಗಳಿಸಿದೆ. ಅಂತಿಮ ದಿನದಾಟದಲ್ಲಿ ಇನ್ನು 209 ರನ್‌ ಗಳಿಸಿದರೆ ಭರ್ಜರಿ ಗೆಲುವಿನೊಂದಿಗೆ ದಿಲ್ಲಿ ಸೆಮಿಫೈನಲ್‌ ತಲುಪಲಿದೆ.

ಎರಡು ವಿಕೆಟಿಗೆ 47 ರನ್ನುಗಳಿಂದ ತನ್ನ ದ್ವಿತೀಯ ಇನ್ನಿಂಗ್ಸ್‌ ಮುಂದುವರಿಸಿದ ಮಧ್ಯ ಪ್ರದೇಶ ತಂಡವು 283 ರನ್‌ ಗಳಿಸಿ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಸಿಡಿಸಿದ್ದ ಹರ್‌ಪ್ರೀತ್‌ ಸಿಂಗ್‌ ಮತ್ತೆ ತಾಳ್ಮೆಯ ಆಟವಾಡಿ 78 ರನ್‌ ಹೊಡೆದರೆ ಪುನೀತ್‌ ದಾತೆ 60 ರನ್‌ ಹೊಡೆದರು. ಅವರಿಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲರಾದರು. ಅಂತಿಮವಾಗಿ ಮಧ್ಯ ಪ್ರದೇಶ 283 ರನ್ನಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರು: ಮಧ್ಯ ಪ್ರದೇಶ 338 ಮತ್ತು 283 (ಪುನೀತ್‌ ದಾತೆ 60, ಹರ್‌ಪ್ರೀತ್‌ ಸಿಂಗ್‌ 78, ಶುಭಂ ಶರ್ಮ 28, ದೇವೇಂದ್ರ ಬಂಡೇಲ 33, ವಿಕಾಸ್‌ ತೋಕಾಸ್‌ 64ಕ್ಕೆ 3, ವಿಕಾಸ್‌ ಮಿಶ್ರಾ 59ಕ್ಕೆ 4); ದಿಲ್ಲಿ 405 ಮತ್ತು ವಿಕೆ‌ಟ್‌ ನಷ್ಟವಿಲ್ಲದೇ 8.

Advertisement

Udayavani is now on Telegram. Click here to join our channel and stay updated with the latest news.

Next